ADVERTISEMENT

ಕೇಕ್ ಮಿಕ್ಸಿಂಗ್ ಖುಷಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST
ಕೇಕ್ ಮಿಕ್ಸಿಂಗ್ ಖುಷಿ
ಕೇಕ್ ಮಿಕ್ಸಿಂಗ್ ಖುಷಿ   

ಅದೊಂದು ವಿಶೇಷ ಸಮಾರಂಭ. ಕ್ರಿಸ್ಮಸ್ ಕೇಕ್ ಮಿಶ್ರಣ ಸಮಾರಂಭದಲ್ಲಿ ಗಣ್ಯರ ಬದಲು ಮಕ್ಕಳ ಜೀವೋದಯ ಮತ್ತು ಅಬ್ರಹಾಮ್ಸ ಅನಾಥಾಶ್ರಮದ ಮಕ್ಕಳು ಪಾಲ್ಗೊಂಡಿದ್ದರು. ಬಿಳಿ ಬಣ್ಣದ ಬಾಣಸಿಗರ ಉಡುಪು ತೊಟ್ಟು ಬಂದಿದ್ದ ಈ ಮಕ್ಕಳೆಲ್ಲಾ  ಕೇಕ್ ಮಿಕ್ಸಿಂಗ್ ಮಾಡಿ ಖುಷಿ ಪಟ್ಟರು. ಅಂದಹಾಗೆ, ಈ ಮಕ್ಕಳಿಗೆ ಖುಷಿಯ ವಾತಾವರಣ ಕಲ್ಪಿಸಿಕೊಟ್ಟಿದ್ದು ಯಶವಂತಪುರದಲ್ಲಿರುವ ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ ಇಂಡಿಯಾ.

ಒಂಬತ್ತರಿಂದ 15 ವರ್ಷದ ಒಳಗಿನ ಮಕ್ಕಳು ಕೇಕ್ ಮಿಕ್ಸಿಂಗ್‌ನಲ್ಲಿ ತೊಡಗುವುದರ ಜತೆಗೆ ಉತ್ಸಾಹದಿಂದ ಗೀತೆಗಳನ್ನು ಹಾಡಿದರು. ಕುಣಿದರು. ಆನಂತರ ಅವರೆಲ್ಲರೂ ಮೆಟ್ರೊ ಸಿಬ್ಬಂದಿ ಜತೆಸೇರಿಕೊಂಡು ಒಣ ಹಣ್ಣು, ಹಣ್ಣಿನ ರಸವನ್ನು ತರಬೇತಿ ಪಡೆದ ಬಾಣಸಿಗರ ನೇತೃತ್ವದಲ್ಲಿ ಹದವಾಗಿ ಬೆರೆಸಿದರು. 

`ಮೆಟ್ರೊ ಕ್ಯಾಷ್ ಆಂಡ್ ಕ್ಯಾರಿ' ಕ್ರಿಸ್‌ಮಸ್‌ಗೆ ಹಲವು ಸ್ವಾದದ ವಿಶೇಷ ಕ್ರಿಸ್‌ಮಸ್ ಕೇಕ್‌ಗಳನ್ನು ಮಾರಾಟ ಮಾಡಲಿದೆ. ಹಣ್ಣಿನ ಕೇಕ್, ಪ್ಲಮ್ ಕೇಕ್, ಡಂಡಿ ಕೇಕ್, ಚಾಕೊಲೆಟ್,, ಪಡ್ಡಿಂಗ್ಸ್, ಸಿಹಿತಿಂಡಿ ಮತ್ತಿತರ ಕ್ರಿಸ್‌ಮಸ್ ವಿಶೇಷ ತಿನಿಸುಗಳನ್ನು ಬಿಕರಿ ಮಾಡಲಿದೆ.   ಪ್ರತಿಯೊಂದು ಕ್ರಿಸ್‌ಮಸ್ ಕೇಕ್ ಮಾರಾಟದಿಂದ ಬರುವ ಹಣದಲ್ಲಿ ಒಂದು ರೂಪಾಯಿಯನ್ನು  ಮಕ್ಕಳ ಜೀವೋದಯ ಮತ್ತು ಅಬ್ರಹಾಮ್ಸ ಅನಾಥಾಶ್ರಮಕ್ಕೆ ನೀಡಲು ಮೆಟ್ರೊ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.