ಕ್ಯಾಡ್ ಸೆಂಟರ್ ವಾಹನಗಳಿಗೆ ಸಂಬಂಧಿಸಿದ ಹಾಗೂ ಅಂತರಿಕ್ಷ ವಿಜ್ಞಾನ ವಿನ್ಯಾಸಕ್ಕೆ ಸಂಬಂಧಿಸಿದ ಅಲ್ಪಾವಧಿ ಹಾಗೂ ಪೂರ್ಣಾವಧಿಯ ಮಾಸ್ಟರ್ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಿದೆ.
ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪಡೆಯುವವರು ಮತ್ತು ವೃತ್ತಿ ನಿರತರಿಗೆ ಈ ಕೋರ್ಸ್ ನೆರವು ನೀಡಲಿದೆ. ಕ್ಯಾಡ್‌ನ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಈ ಕೋರ್ಸ್ ಕಲಿಯಲು ಅವಕಾಶ ಲಭ್ಯ.
ಈ ಎರಡು ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಕ್ಯಾಶಿಯಾ (ಸಿಎಟಿಐಎ), ಆನ್‌ಸಿಸ್ (ಎಎನ್‌ಎಸ್‌ವೈಎಸ್), ಎನ್‌ಎಕ್ಸ್ ಕ್ಯಾಡ್, ಎನ್‌ಎಕ್ಸ್ ಕ್ಯಾಮ್ ಮತ್ತು ಎನ್‌ಎಕ್ಸ್ ನಾಸ್ಟ್ರಾನ್‌ನಲ್ಲಿ ತರಬೇತಿ ನೀಡಲಾಗುವುದು. ವಾಹನಗಳಿಗೆ ಸಂಬಂಧಿಸಿದ ಕೋರ್ಸ್ ಒಟ್ಟು 450 ಗಂಟೆಗಳ ಅವಧಿ ಹೊಂದಿದ್ದು, ವಾಹನಗಳ ವಿನ್ಯಾಸ ಮತ್ತು ನಿರ್ಮಾಣ ಕುರಿತಂತೆ ತರಬೇತಿ ನೀಡಲಾಗುತ್ತದೆ.
ಅಂತರಿಕ್ಷ ವಿಜ್ಞಾನ ವಿನ್ಯಾಸಕ್ಕೆ ಸಂಬಂಧಪಟ್ಟ ಕೋರ್ಸ್ ಒಟ್ಟು 464 ಗಂಟೆಗಳಷ್ಟು ತರಗತಿಗಳನ್ನು ಹೊಂದಿದ್ದು, ವಿನ್ಯಾಸಕ್ಕೆ ಸಂಬಂಧಿಸಿದಂತೆ ವ್ಯಾಪಕ ಕಲಿಕೆ ಸಿಗಲಿದೆ. ಕೋರ್ಸ್‌ಗಳ ವೆಚ್ಚ, ಪಠ್ಯ ಪುಸ್ತಕಗಳು ಸೇರಿ ರೂ.79,900 ಮತ್ತು ತೆರಿಗೆ ಸೇರಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಡ್ರಾಯಿಂಗ್ ಮೊದಲಾದವುಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯ.
`ವಾಹನ ಮತ್ತು ಅಂತರಿಕ್ಷ ವಿಜ್ಞಾನ ವಿನ್ಯಾಸಕ್ಕೆ ಸಂಬಂಧಿಸಿದಂತೆ ಉದ್ಯೋಗವಕಾಶಗಳು ಹೇರಳವಾಗಿವೆ. ಭಾರತದ ವಾಹನ ಮಾರುಕಟ್ಟೆ 7200 ಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟಿದೆ. ಸುಮಾರು ಒಂದೂವರೆ ಕೋಟಿ ಜನರು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ವಾಹನ ಕ್ಷೇತ್ರದಲ್ಲಿ 1700 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು ತೊಡಗಿಸಲಾಗುವುದು. ಆದರೆ ಬೇಡಿಕೆಗೆ ತಕ್ಕಂತೆ ಕೌಶಲ್ಯ ಹೊಂದಿದ ಪರಿಣತರ ಸಂಖ್ಯೆ ಈ ಕ್ಷೇತ್ರದಲ್ಲಿ ಕಡಿಮೆ. ಇದು ಈ ಕ್ಷೇತ್ರದ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು.
ಭಾರತದಲ್ಲಿ ಎಂಜಿನಿಯರ್‌ಗಳು, ಕಂಪ್ಯೂಟರ್ ಪರಿಣತರು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಪರಿಣತರು ಹೆಚ್ಚಿದ್ದರೂ ಅವರಿಗೆ ಅತ್ಯಾಧುನಿಕ ವಿನ್ಯಾಸ ಮತ್ತು ಕ್ಯಾಡ್ ಟೂಲ್‌ಗಳಲ್ಲಿ ಪರಿಣತಿ ಅಗತ್ಯ~ ಎನ್ನುತ್ತಾರೆ ಕ್ಯಾಡ್ ಸೆಂಟರ್‌ನ ಆಡಳಿತ ನಿರ್ದೇಶಕ ಎಸ್. ಕರೈದುಸೆಲ್ವನ್.
`ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕ್ಯಾಡ್ ಸೆಂಟರ್‌ನ ಈ ವಿಷಯಗಳಲ್ಲಿ ಮಾಸ್ಟರ್ ಡಿಪ್ಲೊಮಾ ಕೋರ್ಸ್ ಆರಂಭಿಸಿದೆ. ಸಾಫ್ಟ್‌ವೇರ್ ಪರಿಣತರೇ ಕೋರ್ಸ್‌ನ ಸಾಫ್ಟ್‌ವೇರ್ ಟೂಲ್‌ಗಳನ್ನು ತಯಾರಿಸಿದ್ದಾರೆ. ಅಲ್ಲದೆ ತರಬೇತಿ ನೀಡುವ ಶಿಕ್ಷಕರೂ ಉದ್ದಿಮೆ ರಂಗದ ಹೊಸ ಹೊಸ ಬೆಳವಣಿಗೆಗಳ ಅರಿವು ಹೊಂದಿರುತ್ತಾರೆ~ ಎನ್ನುತ್ತಾರೆ ಅವರು.
ವಾಹನಗಳಿಗೆ ಸಂಬಂಧಿಸಿದ ಕೋರ್ಸ್‌ನಲ್ಲಿ ವಾಹನಗಳ ವಿನ್ಯಾಸ, ನಿರ್ಮಾಣ ಮತ್ತು ಪರೀಕ್ಷೆ ನಡೆಸುವ ಕೌಶಲ್ಯ ವಿದ್ಯಾರ್ಥಿಗಳಿಗೆ ಲಭಿಸಲಿದೆ. ವಾಹನಗಳ ಎಂಜಿನಿಯರಿಂಗ್ ಹಾಗೂ ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕೂಡ ದೊರಕುತ್ತದೆ.
ಕೋರ್ಸ್ ಪೂರ್ತಿಗೊಂಡ ಬಳಿಕ ವಿದ್ಯಾರ್ಥಿಗಳು ಈ ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದ ಉದ್ದಿಮೆಯಲ್ಲಿ ವಿನ್ಯಾಸ ಪರಿಣತರಾಗಿ ಸೇರ್ಪಡೆಗೊಳ್ಳಬಹುದು. ಕ್ಯಾಡ್ ಸಂಸ್ಥೆಯ ಮಾರ್ಗದರ್ಶನ ವಿಭಾಗವು ವಿದ್ಯಾರ್ಥಿಗಳಿಗೆ ಉದ್ಯೋಗದ ಹುಡುಕಾಟದಲ್ಲಿ ನೆರವು ಕೂಡ ನೀಡಲಿದೆ. ಮಾಹಿತಿಗೆ: ಸತ್ಯಭಾಮ, ಕ್ಯಾಡ್ ಸೆಂಟರ್ 99009 91776.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.