
ಪ್ರಜಾವಾಣಿ ವಾರ್ತೆಕ್ರಿಸ್ಮಸ್ ಆಚರಣೆಗಾಗಿ ನಗರದ ಎಂ.ಜಿ ರಸ್ತೆಯಲ್ಲಿರುವ ತಾಜ್ ವಿವಾಂತಾ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕ್ರಿಸ್‌ಮಸ್ ಅಂಗವಾಗಿ ಕೇಕ್ ಹಾಗೂ ಕುಕೀಸ್‌ಗಳ ಮಾರಾಟ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ. ಕೇಕ್ ಹಾಗೂ ಕುಕ್ಕೀಸ್‌ಗಳ ಮಾರಾಟಕ್ಕಾಗಿ ಹೋಟೆಲ್‌ನ ಲಾಬಿಯಲ್ಲಿ ಆಕರ್ಷಕವಾಗಿ ಜಿಂಜರ್‌ಬ್ರೆಡ್ ಮನೆಯನ್ನು ನಿರ್ಮಿಸಲಾಗಿದೆ.
10 ಅಡಿ ಎತ್ತರ ಹಾಗೂ 8 ಅಡಿ ಅಗಲ ಈ ಮನೆಯಲ್ಲಿ ಸಾಂತ ಕ್ಲಾಸ್‌ನ ರೂಪದಲ್ಲಿರುವ ಚಾಕೊಲೇಟ್‌ಗಳು, ಕ್ರಿಸ್‌ಮಸ್ ಕುಕೀಸ್, ಪ್ಲಮ್ ಪಡ್ಡಿಂಗ್, ಪ್ಲಮ್ ಕೇಕ್, ಗ್ರಾಂಡಮಂ ಫ್ರೂಟ್ ಕೇಕ್ ಸೇರಿದಂತೆ ಇತರೆ ವಿಶೇಷ ತಿನಿಸುಗಳು ಲಭ್ಯ.
ಗ್ರಾಹಕರನ್ನು ಆಕರ್ಷಿಸಲು ಈ ಮನೆಯನ್ನು ಜಿಂಜರ್ ಬ್ರೆಡ್ ಕುಕೀಸ್‌ನಿಂದ ಅಲಂಕಾರ ಮಾಡಲಾಗಿದೆ. ಈ ಮಾರಾಟ ಹಾಗೂ ಪ್ರದರ್ಶನವು ಇದೇ ತಿಂಗಳ 25ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.