ADVERTISEMENT

ಕ್ಷಿತಿ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST
ಕ್ಷಿತಿ ರಂಗಪ್ರವೇಶ
ಕ್ಷಿತಿ ರಂಗಪ್ರವೇಶ   

ಖೇಚರ ಭರತನಾಟ್ಯ ಅಕಾಡೆಮಿ: ಶನಿವಾರ ಶ್ರೀಧರ್ ಮತ್ತು ಅನುರಾಧ ಶ್ರೀಧರ್ ಅವರ ಶಿಷ್ಯೆ ಕ್ಷಿತಿ ವೆಂಕಟೇಶ್ ಅವರ ಭರತನಾಟ್ಯ ರಂಗಪ್ರವೇಶ.

ಸ್ಟೇಟ್ ಬ್ಯಾಂಕ್ ಎಜಿಎಂ ವೆಂಕಟೇಶಮೂರ್ತಿ ಮತ್ತು ಅನುರಾಧಾ ಅವರ ಪುತ್ರಿ ಕುಮಾರಿ ಕ್ಷಿತಿ ಹನ್ನೆರಡು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದು, ದೆಹಲಿಯ ಸಿಸಿಆರ್‌ಟಿ ಸಂಸ್ಥೆಯಿಂದ ಶಿಷ್ಯವೇತನ ಪಡೆಯುತ್ತಿದ್ದಾರೆ.

ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿರುದ್ದು, ಜೆಎಸ್‌ಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಮಾಹಿತಿ ವಿಜ್ಞಾನ ವಿಷಯದಲ್ಲಿ ಮೂರನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆ ಆಕೆ. ಅತಿಥಿಗಳು: ಅಶಿಷ್ ಮೋಹನ್ ಖೋಕರ್, ಬಿ.ಭಾನುಮತಿ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.

-----

ಸೂಫಿ, ಪಾಶ್ಚಾತ್ಯ ಫ್ಯೂಷನ್ ಸಂಗೀತ
ಕ್ಲಬ್ ಫ್ಯೂಷನ್: ಶನಿವಾರ ಕೈಲಾಶ್ ಖೇರ್ ಮತ್ತು ಲೆಸ್ಲೆ ಲೆವಿಸ್ ಅವರಿಂದ ಸೂಫಿ  ಮತ್ತು ಪಾಶ್ಚಿಮಾತ್ಯ ಮಿಶ್ರ ಸಂಗೀತ ಕಾರ್ಯಕ್ರಮ.

ಸೂಫಿ ಸಂಗೀತದಿಂದ ಹಿಂದಿ ಚಿತ್ರ ಜಗತ್ತು ಪ್ರವೇಶಿಸಿದ ಕೈಲಾಶ್ ಖೇರ್ ಈಗ ಬಿಡುವಿಲ್ಲದ ಬಹುಭಾಷಾ ಗಾಯಕ. ಜಂಗ್ಲಿ, ಜಾಕಿ ಚಿತ್ರಗಳ ಗೀತೆಗಳ ಮೂಲಕ ಕರ್ನಾಟಕದಲ್ಲೂ ಮನೆಮಾತಾಗಿದ್ದಾರೆ.

ಮುಂಬೈ ಮೂಲದ ಲೆಸ್ಲೆ ಲೆವಿಸ್ ಪಾಶ್ಚಿಮಾತ್ಯ ಸಂಗೀತದಲ್ಲಿ, ಸಂಗೀತ ಸಂಯೋಜನೆಯಲ್ಲಿ ಪಳಗಿದವರು. ಗಜಲ್ ಗಾಯಕ ಹರಿಹರನ್ ಅವರ ಜತೆಗೂಡಿ 90ರ ದಶಕದಲ್ಲಿ ಹೊರತಂದಿದ್ದ `ಕೊಲೋನಿಯಲ್ ಕಸಿನ್ಸ್~ ಆಲ್ಬಂ ಅವರಿಗೆ ಭಾರಿ ಖ್ಯಾತಿ ತಂದುಕೊಟ್ಟಿತು.

ಸೂಫಿ ಗಾಯಕ ಕೈಲಾಶ್ ಖೇರ್ ಮತ್ತು ಲೆಸ್ಲೆ ಲೆವಿಸ್ ನಗರದ ಜನರಿಗೆ ಈಗ ಮಿಶ್ರ ಸಂಗೀತ ಮಾಧುರ್ಯ ಉಣಬಡಿಸಲಿದ್ದಾರೆ.
ಸ್ಥಳ: ಯುಬಿ ಸಿಟಿ, ರಾತ್ರಿ 8. ಮಾಹಿತಿಗೆ 99725 22047

----
ಶಮ್ಮಿಗೆ ಶ್ರದ್ಧಾಂಜಲಿ
ಚಾಹೆ ಕೋಹಿ ಮುಝೆ ಜಂಗ್ಲಿ ಕಹೆ.. ಯಾಹೂ, ಆಜಾ...ಆಜಾ.. ಮೈ ಹೂ ಪ್ಯಾರ ತೇರಾ, ಬಾರ್ ಬಾರ್ ದೇಕೊ.., ಬದನ್ ಪೆ ಸೀತಾರೆ ಲಪೆಟೆ ಹುವೆ, ಒ ಹಸೀನಾ ಜುಲ್ಫೊವಾಲಿ ಜಾನೆ ಜಹಾಂ.., ತುಮ್ಸೆ ಅಚ್ಛಾ ಕೌನ್ ಹೈ .., ಅಕೇಲೆ, ಅಕೇಲೆ ಕಹಾಂ ಜಾರಹೇ ಹೋ.., ಆಸ್ಮಾನ್ ಸೇ ಆಯಾ ಪರಿಷ್ತಾ...

ಶಮ್ಮಿಕಪೂರ್ ಚಿತ್ರಗಳ ಮರೆಯಲಾಗದ ಗೀತೆಗಳು ಇವು. ಶಮ್ಮಿಯ ಬಹುತೇಕ ಎಲ್ಲ ಗೀತೆಗಳನ್ನು ಹಾಡಿದ್ದು ಮಹಾನ್ ಗಾಯಕ ಮೊಹಮ್ಮದ್ ರಫಿ. ಅವರು ಅಕ್ಷರಶಃ ಶಮ್ಮಿ ಗೆ ಕಂಠವಾಗಿದ್ದರು. ಬಿಜು ನಾಯರ್ ತಂಡ ಈಗ ಈ ಗೀತೆಗಳನ್ನು ಹಾಡುವ ಮೂಲಕ ಶಮ್ಮಿ ಕಪೂರ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿದೆ.

ಶನಿವಾರ ನಡೆಯಲಿರುವ `ಟ್ರಿಬ್ಯೂಟ್ ಟು ಶಮ್ಮಿ ಕಪೂರ್~ ಕಾರ್ಯಕ್ರಮ ಶಮ್ಮಿ ಮತ್ತು ರಫಿಯ ಎಲ್ಲ ನೆನಪುಗಳನ್ನು ಹೊತ್ತು ತರಲಿದೆ. ಟಿಕೆಟ್‌ಗಳನ್ನು www.indianstage.in, www.bookmyshow.com  ನಲ್ಲಿ ಪಡೆಯಬಹುದು.
ಸ್ಥಳ: ಎಂಎಲ್‌ಆರ್ ಸೆಂಟರ್, ವೈಟ್‌ಫೀಲ್ಡ್.  ಸಂಜೆ 6.45.

----
ನಾದ ಸೌರಭ ಸಂಗೀತೋತ್ಸವ
ಸರಸ್ವತಿ ಸಂಗೀತ ವಿದ್ಯಾಲಯ: ಶನಿವಾರ 82ನೇ ವಾರ್ಷಿಕೋತ್ಸವ ನಿಮಿತ್ತ ನಾದ ಸೌರಭ ಸಂಗೀತೋತ್ಸವ. ವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಲನಾದ ವೃಂದಗಾನ. ಗಾಂಧಾರ ಮಂದಾಕಿನಿ ವೃಂದದಿಂದ ವೃಂದನಾದ.  ವಾಗೀಶ್ ಭಟ್ ಅವರಿಂದ ಸಂತನಾದ. ಶ್ಯಾಮಲಾ ಭಾವೆ ಅವರಿಂದ ಲಘು ಶಾಸ್ತ್ರೀಯ ಗಾಯನ. ಅವರದೇ ಗಾನ ಸಂಗ್ರಹಗಳ `ನಾದಶ್ಯಾಮಲಾ~ ಸೀ ಡಿ ಲೋಕಾರ್ಪಣೆ.

ಭೋಪಾಲ್‌ನ ಪಂಡಿತ್ ಉಲ್ಲಾಸ್ ತೇಲಂಗ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ. ಡಾ.ಕೆ. ವಾಗೀಶ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಗುರುನಂದನ್ ಕಲ್ಯಾಣಪುರ, ವಿಶ್ವನಾಥ ನಾಕೋಡ (ತಬಲಾ), ರವೀಂದ್ರ ಕಾಟೋಟಿ (ಹಾರ್ಮೋನಿಯಂ), ಲಕ್ಷ್ಮಿಗೋವಿಂದ ಭಟ್ (ತಾಳ)

ಸಂಗೀತ ವಿದ್ವಾಂಸ ಕುರುಡಿ ವೆಂಕಣ್ಣಾಚಾರ್, ಗಮಕ ಕಲಾ ವಿದ್ವಾಂಸ ಎಂ.ಎ. ಜಯರಾಮ ರಾವ್, ಹಿಂದುಸ್ತಾನಿ ಸಂಗೀತ ವಿದ್ವಾಂಸ ಡಿ.ಬಿ. ಹರೀಂದ್ರ ಅವರಿಗೆ `ಗೋವಿಂದ ಲಕ್ಷ್ಮಿ~ ಪ್ರಶಸ್ತಿ ಪ್ರದಾನ.
ಅತಿಥಿಗಳು: ಎಂ.ಆರ್.ಶ್ರೀನಿವಾಸಮೂರ್ತಿ, ಜಯರಾಮರಾಜೇ ಅರಸ್, ತಿರುದಾಸ ಪ್ರಭು, ಡಾ. ಎಂ.ಆರ್.ವಿ.ಪ್ರಸಾದ್.
ಸ್ಥಳ: ಬೆಂಗಳೂರು ಗಾಯನ ಸಮಾಜ ಸಭಾಂಗಣ, ಕೆ.ಆರ್.ರಸ್ತೆ. ಸಂಜೆ5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.