ADVERTISEMENT

ಗ್ರೀನ್ ಗಾರ್ಡೇನಿಯಾ, ವಿಂಡ್ಸರ್...

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 19:30 IST
Last Updated 12 ಆಗಸ್ಟ್ 2011, 19:30 IST
ಗ್ರೀನ್ ಗಾರ್ಡೇನಿಯಾ, ವಿಂಡ್ಸರ್...
ಗ್ರೀನ್ ಗಾರ್ಡೇನಿಯಾ, ವಿಂಡ್ಸರ್...   

ಬೆಂಗಳೂರಿನ ಪ್ರತಿಷ್ಠಿತ ತಾರಾ ಹೋಟೆಲ್‌ಗಳಾದ ರಾಯಲ್ ಗಾರ್ಡೇನಿಯಾ ಹಾಗೂ ಐಟಿಸಿ ವಿಂಡ್ಸರ್ ಸೇರಿದಂತೆ ಮುಂಬೈ, ದೆಹಲಿ, ಆಗ್ರಾ, ಹೈದರಾಬಾದ್, ಕೋಲ್ಕತ್ತದ ಐಟಿಸಿ ಐಷಾರಾಮಿ ಹೋಟೆಲ್‌ಗಳಿಗೆ ಅಮೆರಿಕದ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ `ಲೀಡ್~ (ಲೀಡರ್‌ಶಿಪ್ ಇನ್ ಎಜರ್ನಿ ಆ್ಯಂಡ್ ಎನ್ವಿರಾನ್‌ಮೆಂಟಲ್) ಪ್ಲಾಟಿನಂ ಪ್ರಶಸ್ತಿ ಲಭಿಸಿದೆ. ಜಗತ್ತಿನ ಅತ್ಯುತ್ತಮ ಪರಿಸರ ಸ್ನೇಹಿ ಐಷಾರಾಮಿ ಹೋಟೆಲ್ ಸರಣಿ ಎಂಬ ಹಿರಿಮೆಯೂ ಐಟಿಸಿಗೆ ದೊರಕಿದೆ.

`ರೆಸ್ಪಾನ್ಸಿಬಲ್ ಲಕ್ಸುರಿ~ (ಹೊಣೆಗಾರಿಕೆಯೊಂದಿಗೆ ಐಷಾರಾಮ) ಮಂತ್ರ ಜಪಿಸುತ್ತಿರುವ ಐಟಿಸಿ ಸಮೂಹಕ್ಕೆ ಇದು ಹೆಗ್ಗಳಿಕೆ.  ಈ ಸಮೂಹ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಒಳಾಂಗಣ, ಹೊರಾಂಗಣ ವಿನ್ಯಾಸ ರೂಪಿಸುವಾಗ ವಿಶ್ವ ದರ್ಜೆಯ ಪರಿಸರ ಸ್ನೇಹಿ ಕ್ರಮ ಅನುಸರಿಸುತ್ತಿದೆ.

ವಿದ್ಯುತ್, ನೀರಿನ ಬಳಕೆಯಲ್ಲಿ ಮಿತವ್ಯಯ, ಸಮರ್ಪಕ ತ್ಯಾಜ್ಯ ವಿಲೇವಾರಿಯಿಂದಾಗಿ ದೇಶದಲ್ಲಿ ಹಸಿರು ಕಟ್ಟಡಗಳ ಅಭಿಯಾನಕ್ಕೆ ಪ್ರೇರಣೆ ಒದಗಿಸುವಂತೆ ಇದೆ.

ಅಮೆರಿಕದ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಅಧ್ಯಕ್ಷ ರಿಕ್ ಫೆಡ್ರಿಜ್ಜಿ ಹೇಳುವಂತೆ ಪರಿಸರ ಉಳಿಸಲು, ಕಾರ್ಬನ್ ಪ್ರಮಾಣ ಕಡಿಮೆ ಮಾಡಲು ನಾವು ಏನು ಮಾಡಲು ಸಾಧ್ಯ ಎಂಬುದಕ್ಕೆ ಐಟಿಸಿ ಹೋಟೆಲ್‌ಗಳು ಸಾಕ್ಷಿಯಾಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.