ADVERTISEMENT

ಚಾನ್ಸೆರಿಯಲ್ಲಿ ಹೈದರಾಬಾದಿ ಸವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST
ಚಾನ್ಸೆರಿಯಲ್ಲಿ ಹೈದರಾಬಾದಿ ಸವಿ
ಚಾನ್ಸೆರಿಯಲ್ಲಿ ಹೈದರಾಬಾದಿ ಸವಿ   

ಹೈದರಾಬಾದಿನ ನಿಜಾಮರು ಕಲೆ, ಸಂಸ್ಕೃತಿಗೆ ಒತ್ತು ನೀಡಿದಂತೆ ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾದವರು. ಊಟೋಪಚಾರ, ಆಹಾರದ ವಿಷಯದಲ್ಲೂ ಅಷ್ಟೆ.

ಪರ್ಷಿಯನ್ ಸೇರಿದಂತೆ ದೇಶ ವಿದೇಶಗಳ ಆಹಾರ ಶೈಲಿಯನ್ನು ಪ್ರೋತ್ಸಾಹಿಸುತ್ತ ಬಂದವರು. ಹೀಗಾಗಿಯೇ ಖಾರ, ಎಣ್ಣೆ, ಸಮೃದ್ಧ ಮಸಾಲೆಯುಕ್ತ ಹೈದರಾಬಾದ್‌ನ ನಿಜಾಮಿ ಶೈಲಿ ಅಡುಗೆ ಈಗಲೂ ದೇಶದೆಲ್ಲೆಡೆ ಪ್ರಸಿದ್ಧ.

ಇಂಥ ಹೈದರಾಬಾದಿ ಆಹಾರವನ್ನು ಬೆಂಗಳೂರಿನ ಜನರಿಗೆ ಉಣಬಡಿಸಲು ಲ್ಯಾವೆಲ್ಲೆ ರಸ್ತೆಯ ಚಾನ್ಸೆರಿ ಹೋಟೆಲ್ ಹೈದರಾಬಾದಿ ಆಹಾರೋತ್ಸವ ನಡೆಸುತ್ತಿದೆ.

ಹೋಟೆಲ್ ಪ್ರವೇಶದ್ವಾರದಲ್ಲಿ ನಿಜಾಮರ ಸಾಂಸ್ಕೃತಿಕ ಹೆಗ್ಗುರುತಾದ ಚಾರ್‌ಮಿನಾರ್‌ನ ಕಲಾಕೃತಿ ಕಣ್ಮನ ಸೆಳೆಯುತ್ತದೆ. ನಿಜಾಮರ ಕಾಲದ ಆಹಾರವನ್ನು ಸವಿಯುವ ಮಂದಿಗೆ ಅಂದಿನ ದರ್ಬಾರ್ ನೆನಪಿಸುವುದು ಇದರ ಉದ್ದೇಶ. ಒಳ ಪ್ರವೇಶಿಸಿದರೆ ನಿಜಾಂ ಕಾಲದ ದಿರಿಸಿನಲ್ಲಿ ಸಿಬ್ಬಂದಿ ಎದುರುಗೊಳ್ಳುತ್ತಾರೆ. ವಾರಾಂತ್ಯದಲ್ಲಿ ಭೋಜನದ ಜತೆ ಕಲಾವಿದರಿಂದ ಸುಶ್ರಾವ್ಯ ಹಿಂದಿ ಗೀತೆಗಳನ್ನೂ ಆಸ್ವಾದಿಸಬಹುದು.

ಸೂಪ್, ರೈತಾ, ಹಪ್ಪಳ, ಹಣ್ಣು, ಬಗೆಬಗೆಯ ಸಿಹಿ ತಿಂಡಿಗಳು ಮಾತ್ರವಲ್ಲದೆ ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂ ಬಗೆಯ ಆಹಾರವಿದೆ. ಮಾಂಸಾಹಾರಿ ಪ್ರಿಯರಿಗೆ ಕಚ್ಚಿ ಗೋಷ್ಟ್ ಬಿರಿಯಾನಿ, ದಮ್ ಕಾ ಮುರ್ಗ್ ಹೈದರಾಬಾದಿ, ತಾಲಿ ಹುಯ್ ಮಚಲಿ, ಹಲೀಮ್, ಪತ್ತರ್ ಕಾ ಗೋಷ್ಟ್. ಸಸ್ಯಾಹಾರದಲ್ಲಿ ಸೀಕ್ ಕೆಬಾಬ್, ಪನ್ನೀರ್ ಶಾಹಿ ಕುರ್ಮಾ, ಮಿರ್ಚ್ ಕಾ ಸಲನ್, ಬಗ್ರಾ ಬೈಂಗನ್, ನಿಜಾಮಿ ಹಂಡಿ ಸಬ್ಜ್ ಮಸಾಲ, ಕಡ್ಡು ಕಾ ದಲ್ಚಾ ಮುಖ್ಯ. ನಟಿ ಸುಮಲತಾ ಉದ್ಘಾಟಿಸಿದ ಈ ಆಹಾರೋತ್ಸವ ಅ.9ರ ವರೆಗೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.