ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ಅಂದು ಸ್ವಲ್ಪವಾದರೂ ಚಿನ್ನ ಖರೀದಿಸುತ್ತಾರೆ.
ಚಿನ್ನದ ಬೆಲೆ ಹೆಚ್ಚಾಗುತ್ತಿದ್ದರೂ ಚಿನ್ನ ಕೊಳ್ಳುವವರು ಮಾತ್ರ ಕಡಿಮೆಯಾಗಿಲ್ಲ. ಇಂಥ ಚಿನ್ನದ ವ್ಯಾಮೋಹಿಗಳಿಗಾಗಿ ತೆಲುಗು ಸಾಹಿತಿ ವಾಸಿರೆಡ್ಡಿ ವೇಣುಗೋಪಾಲ್ ಬರೆದಿರುವ `ಚಿನ್ನ ನೀನೆಷ್ಟು ಚೆನ್ನ!~ ಕೃತಿಯನ್ನು ಶಂಕರಾನಂದ್ ಅವರು ಕನ್ನಡಕ್ಕೆ ತಂದಿದ್ದಾರೆ.
ವಸಂತ ಪ್ರಕಾಶನದ ಈ ಕೃತಿಯನ್ನು `ಬಂಗಾರದ ಬಗೆಗೆ ಕನ್ನಡದಲ್ಲಿ ಇರುವ ಏಕೈಕ ಪುಸ್ತಕವಿದು~ ಎಂದು ಅನುವಾದಕರು ಹೇಳಿಕೊಂಡಿದ್ದಾರೆ. ಚಿನ್ನದ ಕ್ಯಾರೆಟ್, ಅದರ ಅಂತರರಾಷ್ಟ್ರೀಯ ಮಾರುಕಟ್ಟೆ, ವಿದ್ಯಮಾನಗಳು, ಉತ್ಪತ್ತಿ ಮತ್ತು ಬೇಡಿಕೆ ನಡುವಿನ ವ್ಯತ್ಯಾಸದ ವಿಶ್ಲೇಷಣೆ, ಚಿನ್ನವನ್ನು ಎಲ್ಲಿ ಖರೀದಿಸಬೇಕು, ಹೀಗೆ ಖರೀದಿಸಬೇಕು, ಉಂಗುರ ತೊಡಿಸುವುದು ಹೇಗೆ ಮೊದಲಾದ ಸಣ್ಣಪುಟ್ಟ ವಿಷಯಗಳನ್ನೂ ಪುಸ್ತಕ ಒಳಗೊಂಡಿದೆ. ಈ ಪುಸ್ತಕ ನಗರದ ಪುಸ್ತಕ ಮಳಿಗೆಗಳಲ್ಲೂ ಲಭ್ಯ. ಬೆಲೆ 120 ರೂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.