ADVERTISEMENT

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಒಟಿಕಾನ್ ಶ್ರವ್ಯ ಸಾಧನ
ರಾಜನ್ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆ ಸುಧಾರಿತ ತಂತ್ರಜ್ಞಾನದ ಒಟಿಕಾನ್ ಇಂಟಿಗಾ ಎಂಬ ವಿಶ್ವದ ಅತಿ ಸಣ್ಣ ಶ್ರವ್ಯ ಸಾಧನ ಪರಿಚಯಿಸಿದೆ.

ಪ್ರತಿಷ್ಠಿತ ವಿನ್ಯಾಸದ ಈ ಸಾಧನವು ಹಲವು ಅನುಕೂಲಗಳನ್ನು ಹೊಂದಿದೆ. ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಹೋರ್ಜಂಟ್ರಮ್ ವಿಶ್ವವಿದ್ಯಾಲಯದ ಸಂಶೋಧಕರು ಒಟಿನಾ ಇಂಟಿಗಾ ಸಾಧನ ರೂಪಿಸಿದ್ದಾರೆ. ಹಿಯರಿಂಗ್ ಸಾಧನ ಉಪಯೋಗಿಸಲು ಸಾಕಷ್ಟು ಸಮಯ ಬೇಕು. ಆದರೆ ನೂತನ ಇಂಟಿಗಾವನ್ನು ಯಾವುದೇ ತೊಡಕಿಲ್ಲದೆ ಧರಿಸಬಹುದಾಗಿದೆ.

ಇಂಟಿಗಾ ಅತಿ ಸಣ್ಣ ಗಾತ್ರದಲ್ಲಿದ್ದು, ಆರ್ಗಾನಿಕ್ ಶೇಪ್ ಒಳಗೊಂಡಿದೆ. ಮೇಲ್ಮೈ ನಯವಾಗಿದ್ದು ಅಗೋಚರ ಮೈಕ್ರೊಫೋನ್ ಒಳಗೊಂಡಿದೆ. ಇದರಲ್ಲಿ ಯಾವುದೇ ಪುಷ್ ಬಟನ್ಸ್ ಇರುವುದಿಲ್ಲ. ಕಿವಿಯ ಹಿಂದೆ ಚೆನ್ನಾಗಿ ನಿಲ್ಲುತ್ತದೆ. ಇದರ ರಿಸೀವರ್ ವೈರ್ ಬಹುತೇಕ ಕಾಣಿಸಿಕೊಳ್ಳುವುದಿಲ್ಲ. ಧರಿಸಿದಾಗ ಆರಾಮವೆನಿಸುತ್ತದೆ.

ಒಟಿಕಾನ್ ಇಂಟಿಗಾ ಸಾಧನವನ್ನು ಮಧ್ಯಮ ಮಟ್ಟದ ಕಿವುಡುತನ ಸಮಸ್ಯೆ ಇರುವವರಿಂದ ಶೇ 80ಕ್ಕೂ ಹೆಚ್ಚು ಸಮಸ್ಯೆ ಇರುವವರೂ ಬಳಕೆ ಮಾಡಬಹುದು. ರಾಜನ್ ಸ್ಪೀಚ್ ಆ್ಯಂಡ್ ಹಿಯರಿಂಗ್‌ನ ಎಲ್ಲಾ ಕೇಂದ್ರಗಳಲ್ಲಿ ಈ ಸಾಧನ ಲಭ್ಯ. ಮಾಹಿತಿಗೆ: 4151 0404, 6546 7791.

ಸಿಂಬಾ ಟಾಯ್ಸ
ಮಕ್ಕಳ ಆಟಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸಿಂಬಾ ಟಾಯ್ಸ `ಮಿ.ಮೆನ್ ಅಂಡ್ ಲಿಟಲ್ ಮಿಸ್~ ಸರಣಿಯ ಆಕರ್ಷಕ ಬೊಂಬೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಪುಟಾಣಿ ಮಕ್ಕಳನ್ನು ಖುಷಿ ಪಡಿಸುವ ರೀತಿಯಲ್ಲಿ ಈ ಬೊಂಬೆಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು ಹಲವು ಬಣ್ಣಗಳಲ್ಲಿ ಲಭ್ಯವಿದೆ. ಚಿಣ್ಣರು ಹಾಗೂ ಮಕ್ಕಳಿಗೆ ಭರಫೂರ ಮನರಂಜನೆ ನೀಡುತ್ತವೆ.

ನಯವಾದ ಕಾಟನ್ ಬಟ್ಟೆಯಿಂದ ತಯಾರಿಸಲಾಗಿರುವ ಈ ಬೊಂಬೆಗಳನ್ನು ಮುಟ್ಟಿದಾಗ ಮೆತ್ತನೆಯ ಅನುಭವ ಉಂಟಾಗುತ್ತದೆ. ಬೊಂಬೆಗಳಲ್ಲದೆ ಟ್ರೆಂಡಿ ಹಾಗೂ ಫ್ಯಾಷನಬಲ್ ಬ್ಯಾಗ್‌ಗಳು, ಸ್ಪೋರ್ಟ್ಸ್ ಬ್ಯಾಗ್‌ಗಳು, ಲ್ಯಾಪ್‌ಟಾಪ್ ಬ್ಯಾಗ್‌ಗಳನ್ನು ಕೂಡ ಇದು ಹೊರತಂದಿದೆ. ರಿಲಯೆನ್ಸ್, ಲ್ಯಾಂಡ್‌ಮಾರ್ಕ್ ಹಾಗೂ ಟೈಮ್‌ಔಟ್ ಮಳಿಗೆಗೆಳಲ್ಲಿ ಈ ಉತ್ಪನ್ನಗಳು ಲಭ್ಯವಿದೆ. 

ಲಾಲಿಕಿ
ಗಾಜಿನ ಪಾತ್ರೆ ತಯಾರಿಕೆಯಲ್ಲಿ ವಿಶ್ವದಾದ್ಯಂತ ಖ್ಯಾತಿಗಳಿಸಿರುವ ಲಾಲಿಕಿ ಕಂಪೆನಿ ಮೂಲತಃ ಫ್ರೆಂಚ್ ಮೂಲದ್ದು. ಇದು ದಕ್ಷಿಣ ಭಾರತದಲ್ಲಿ ತನ್ನ ಪ್ರಥಮ ಮಳಿಗೆಯನ್ನು ಯುಬಿ ಸಿಟಿಯಲ್ಲಿ ಪ್ರಾರಂಭಿಸಿದೆ.

ಆಕರ್ಷಕ ವಿನ್ಯಾಸದಲ್ಲಿರುವ ಈ ಮಳಿಗೆ ಗಾಜಿನಿಂದ ತಯಾರಾದ ವಸ್ತುಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಮಳಿಗೆಯಲ್ಲಿ ಕರಕುಶಲ ಗಾಜಿನ ವಸ್ತುಗಳು, ಆಕರ್ಷಕ ಪುತ್ಥಳಿಗಳು, ಪರ್‌ಫ್ಯೂಮ್ ಬಾಟೆಲ್ಸ್, ಕ್ರಿಸ್ಟಲ್ ಫ್ಲವರ್‌ವಾಸ್, ಚೆರಬ್ ದೇವತೆಯ ಪುತ್ಥಳಿ, ಕುದುರೆ, ಮೀನು, ಹಕ್ಕಿಗಳು, ಗಣೇಶ ಹಾಗೂ ನಟರಾಜ ವಿಗ್ರಹಗಳು ಲಭ್ಯ.
 
ಈ ಉತ್ಪನ್ನಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ. ಇಲ್ಲಿ ಗಾಜಿನ ವಸ್ತುಗಳಲ್ಲದೆ 30ಕ್ಕೂ ಅಧಿಕ ಬಗೆಯ ಪರಿಮಳದ ಸುಗಂಧದ್ರವ್ಯಗಳ ದೊಡ್ಡ ಸಂಗ್ರಹವಿದೆ. ಸ್ಥಳ: ಲಲಿಕ್ಯೂ, ದಿ ಕಲೆಕ್ಷನ್, ಯುಬಿ ಸಿಟಿ, ವಿಠ್ಠಲ್ ಮಲ್ಯರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.