ADVERTISEMENT

ಛಲದಿಂದ ಬದುಕಿಗೆ ಹೊಸ ನೋಟ ನೀಡಿದ ಚನ್ನವೀರ

ಬದುಕು ಬನಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಚನ್ನವೀರ
ಚನ್ನವೀರ   

ನಿರೂಪಣೆ: ಮಂಜುನಾಥ ಬಿ.ವಿ.
ನಾನು ಚನ್ನವೀರ. ಹುಟ್ಟಿದ್ದು ಕಲಬುರ್ಗಿ ಜಿಲ್ಲೆ. ಮಧ್ಯಮ ವರ್ಗದ ಕುಂಟಂಬ ನಮ್ಮದು. ನಾನು ಹುಟ್ಟಿನಿಂದ ಅಂಧ. ಆದರೆ ಸಣ್ಣ ವಯಸ್ಸಿನಿಂದಲೇ ಕೀಳರಿಮೆಯನ್ನು ಮೆಟ್ಟಿನಿಂತು ಓದಿನತ್ತ ಗಮನ ನೀಡಿದ್ದರಿಂದ ಇಂದು ಭವಿಷ್ಯದ ಹಾದಿ ಗಟ್ಟಿಯಾಗಿದೆ. ಅಂದರೆ ನಾನು ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದೇನೆ.

ನನ್ನ ಪ್ರಾಥಮಿಕ ಶಿಕ್ಷಣದಿಂದ ಕಾಲೇಜುವರೆಗೂ ಕಲಬುರ್ಗಿಯಲ್ಲಿಯೇ ಆಯಿತು. ಏಳು ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಬಂದೆ. ಸಮಾಜಕ್ಕೆ ಮತ್ತು ಅಂಧರ ಸಮುದಾಯಕ್ಕೆ ಏನಾದರೂರು ಮಾಡಬೇಕೆಂಬ ಹಂಬಲದಿಂದಲೇ ನಾನು ಇಲ್ಲಿಗೆ ಬಂದಿದ್ದು. ಈ ಮಹಾನಗರಕ್ಕೆ ಬಂದಾಗ ನನಗೆ ಆಶ್ರಯ ಸಿಕ್ಕಿದ್ದು ವಿಜಯನಗರದ ಬಾಲಗಂಗಾಧರನಾಥ ಸ್ವಾಮೀಜಿ ಅಂಧರ ವಿದ್ಯಾರ್ಥಿ ನಿಲಯದಲ್ಲಿ.ಅ

ಲ್ಲಿಂದ ನನ್ನ ಜೀವನ ಬದಲಾಯಿತು. ಈಗ ನಾನು ಅಂಧರ ರಾಷ್ಟ್ರೀಯ ಒಕ್ಕೂಟದಲ್ಲಿ ಯುವ ಸಂಯೋಜಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಬಲಾ ನುಡಿಸುವುದು ನನ್ನ ಹವ್ಯಾಸ. ವಿವಿಧ ಕಾರ್ಯಕ್ರಮಗಳಲ್ಲಿ ತಬಲಾ ನುಡಿಸುತ್ತೇನೆ. ಇಲ್ಲಿಗೆ ಬಂದ ಮೇಲೆ ಶಿಕ್ಷಣ ಮುಂದುವರಿಸಲು ನನಗೆ ಸುಲಭವಾಯಿತು. ಇದೀಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಾತ್ನಕೋತ್ತರ ಪದವಿಯನ್ನೂ ಮುಗಿಸಿದ್ದೇನೆ.

ADVERTISEMENT

ಇಲ್ಲಿ ಒಂದು ಮುಖ್ಯವಾದ ವಿಷಯ ಹಂಚಿಕೊಳ್ಳಬೇಕು... ಕೆಪಿಎಸ್‌ಸಿ ಪರೀಕ್ಷೆ ಬಹಳ ಕಷ್ಟ ಅನ್ನುತ್ತಾರೆ. ಆದರೆ ಛಲದಿಂದ ಓದಿ ಪರೀಕ್ಷೆ ಬರೆದರೆ ಕಷ್ಟವೇನಿಲ್ಲ. ಯಾಕೆಂದರೆ, ನಾನು 2015ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣನಾದೆ. ಪ್ರಥಮ ದರ್ಜೆ ಸಹಾಯಕ ಮತ್ತು ದ್ವೀತಿಯ ದರ್ಜೆ ಸಹಾಯಕ ಹುದ್ದೆಗಳಿಗೆ ನಾನು ಆಯ್ಕೆಯಾಗಿದ್ದೇನೆ. ಅದರಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸರ್ಕಾರದ ಆದೇಶ ಪತ್ರದ ನೀರಿಕ್ಷೆಯಲ್ಲಿದ್ದೇನೆ.

ವಿಶ್ವವಿದ್ಯಾಲಯದಲ್ಲಿ ಅಂಧ ವಿದ್ಯಾರ್ಥಿಗಳ ಬೇಡಿಕೆಗಳು ಹಾಗೂ ಕುಂದು ಕೊರೆತೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೆ. ಅದರ ಫಲವಾಗಿ 2015–16ರಲ್ಲಿ ಉಚಿತ ಲ್ಯಾಪ್‌ಟಾಪ್‌ಗಳು ಫಲಾನುಭವಿಗಳಿಗೆ ಸಿಗುವಂತಾಯಿತು. ನಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರಿಗೆ ಆಯ್ಕೆಯಾದವನು ನಾನೊಬ್ಬನೇ, ಇದು ನನಗೆ ಮಾತ್ರವಲ್ಲ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

ಇದರ ನಂತರವು ಅಂಧರಿಗಾಗಿ ಹಾಗೂ ಸಮಾಜಕ್ಕೆ ನಿರಂತರ ಜನರಪರ ಕಾರ್ಯಗಳನ್ನು ಮಾಡಬೇಕೆಂಬುದು ನನ್ನ ಗುರಿ. ಕೆಎಎಸ್ ಹಾಗೂ ಐಎಎಸ್ ಆಗಬೆಂಕೆಂಬ ಮಹದಾಸೆ ಇದೆ. ಪರೀಕ್ಷೆ ಕಟ್ಟಿ ಪಾಸಾಗಿ ಉನ್ನತ ಹುದ್ದೆ ಪಡೆದುಕೊಳುತ್ತೇನೆ ಎಂಬ ಆತ್ಮವಿಶ್ವಾಸವೂ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.