ದೇಶದ ಅತಿದೊಡ್ಡ ಬಿಸಿನೆಸ್ ರಸಪ್ರಶ್ನೆ ಸ್ಪರ್ಧೆ `ಟಾಟಾ ಕ್ರುಸಿಬಲ್ ಬ್ಯುಸಿನೆಸ್ ಕ್ವಿಜ್ 2011~ ಭಾನುವಾರ ನಡೆಯಲಿದೆ.
ಬೆಂಗಳೂರು ವಲಯ ಮಟ್ಟದ ಈ ಕ್ವಿಜ್‌ನಲ್ಲಿ ಟಾಟಾ ಹಾಗೂ ಮತ್ತಿತರ ಕಾರ್ಪೊರೇಟ್ ಉದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ವಿಜೇತರಾದವರಿಗೆ 75 ಸಾವಿರ ಹಾಗೂ ರಾಷ್ಟ್ರಮಟ್ಟದಲ್ಲಿ ವಿಜೇತರಾದವರಿಗೆ 4 ಲಕ್ಷ ರೂಪಾಯಿ ಬಹುಮಾನ ದೊರೆಯಲಿದೆ.
ಸ್ಥಳ: ಸೇಂಟ್ ಜಾನ್ಸ್ ಆಡಿಟೋರಿಯಂ, ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಮುಂಭಾಗ, ಕೋರಮಂಗಲ. ಮಧ್ಯಾಹ್ನ 2. ಪ್ರವೇಶ ಉಚಿತ. ನೋಂದಣಿಗೆ: www.tatacrucible.com.
ಪಿಇಎಸ್ ಪದವಿ
ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವಿ ಪ್ರದಾನ ಸಮಾರಂಭ ಶನಿವಾರ ನಡೆಯಲಿದೆ. ಡಾ. ಪಿ.ಆರ್.ಕುಮಾರ್ ಹಾಗೂ ಡಾ.ಎಚ್. ಮಹೇಶಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಆರ್.ದೊರೆಸ್ವಾಮಿ ಉಪಸ್ಥಿತರಿರುತ್ತಾರೆ. ಸ್ಥಳ: ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 100 ಅಡಿ ರಿಂಗ್ ರಸ್ತೆ, ಬನಶಂಕರಿ 3ನೇ ಹಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.