ADVERTISEMENT

ಟಾಟಾ ಕ್ರುಸಿಬಲ್ ಕ್ಯಾಂಪಸ್ ಕ್ವಿಜ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಟಾಟಾ ಸಮೂಹ ನಡೆಸುವ ಪ್ರತಿಷ್ಠಿತ ಬಿಸಿನೆಸ್ ಸ್ಪರ್ಧೆ ಟಾಟಾ ಕ್ರುಸಿಬಲ್ `ಕ್ಯಾಂಪಸ್ ಕ್ವಿಜ್~ನಲ್ಲಿ ಐಐಎಂ ಬೆಂಗಳೂರು ತಂಡ ಗೆಲುವು ಸಾಧಿಸಿತು. ಹೊಸೂರು ರಸ್ತೆಯ ನಿಮ್ಹೋನ್ಸ್‌ನಲ್ಲಿ ನಡೆದ ಸ್ಪರ್ಧೆ ಅತ್ಯಂತ ರೋಚಕವಾಗಿತ್ತು. ಪ್ರಬಲ ಪೈಪೋಟಿ ನಡುವೆ ಅಂತಿಮವಾಗಿ ಐಐಎಂ ಬೆಂಗಳೂರಿನ ನಿಶಾಂತ್ ಮತ್ತು ಕಲೈ ಸೆಲ್ವಂ ಗೆಲುವು ಸಾಧಿಸಿದರು.

ಆರ್.ವಿ.ಎಂಜಿನಿಯರಿಂಗ್ ಕಾಲೇಜ್‌ನ ವರುಣ್ ಮತ್ತು ಅರುಣ್ ರನ್ನರ್‌ಅಪ್ ಆಗಿ ಹೊರಹೊಮ್ಮಿದರು. ಟಾಟಾ ಕ್ರುಸಿಬಲ್ ಸ್ಪರ್ಧೆಯ ಸ್ಥಳೀಯ ಸುತ್ತಿನಲ್ಲಿ ವಿಜೇತರಾರ ಈ ಎರಡು ತಂಡಗಳು ಏಪ್ರಿಲ್ 8ರಂದು ಮುಂಬಯಿಯಲ್ಲಿ ನಡೆಯುವ ಫೈನಲ್ಸ್‌ಗೆ ಪ್ರವೇಶ ಪಡೆದವು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಾಟಾ ಬಿಪಿ ಸೋಲಾರ್ ಸಂಸ್ಥೆಯ ಸಿಇಒ ಕೆ.ಸುಬ್ರಹ್ಮಣ್ಯ ವಿಜೇತರಿಗೆ ಬಹುಮಾನ ವಿತರಿಸಿದರು.

ಮೊದಲ ಸ್ಥಾನ ಗಳಿಸಿದ ತಂಡ ರೂ.75 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡ ರೂ.35 ಸಾವಿರ ನಗದು ಬಹುಮಾನ ಪಡೆದುಕೊಂಡವು.  ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ಕಾರ್ಯಕ್ರಮ ನಡೆಸಿಕೊಟ್ಟರು.
 
ಸ್ಥಳೀಯ ಸುತ್ತಿನಲ್ಲಿ 200ಕ್ಕೂ ಹೆಚ್ಚು ಉತ್ಸಾಹಿ ತಂಡಗಳು ಭಾಗವಹಿಸಿದ್ದವು. ರಾಷ್ಟ್ರೀಯ ಸುತ್ತಿನಲ್ಲಿ ವಿಜೇತವಾಗುವ ಪ್ರಥಮ ಹಾಗೂ ರನ್ನರ್ ಅಪ್ ತಂಡಗಳು ಯುಕೆ, ಸಿಂಗಪುರ ಸುತ್ತಿನಲ್ಲಿ ಗೆದ್ದ ತಂಡಗಳೊಂದಿಗೆ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.