`ಡಿವಿಜಿ ಪದತಲದಲ್ಲಿ ಕುಳಿತು ಅನೇಕ ಜೀವನಪಾಠಗಳನ್ನು ಕಲಿತಿದ್ದೇನೆ. ನಮ್ಮ ಹಿರಿಯರ ಸಾಧನೆಗಳ ಬಗ್ಗೆ ತಿಳಿದಿದ್ದೇನೆ. ಅವರು ಕಲಿಸಿದ ಪಾಠಗಳು ಜೀವನ ಪಾಠಗಳಾಗಿವೆ. ಅವರ ಕಗ್ಗ ನಮ್ಮ ಬಾಳಿನ ಕೈದೀಪ. ದಿನಕ್ಕೊಂದು ಕಗ್ಗದ ಪದ್ಯ ಓದಿದರೆ ಆತ್ಮ ಉದ್ಧಾರವಾದಂತೆ...~
ವೀಯೆಲ್ಲೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾನದ ಆಶ್ರಯದಲ್ಲಿ ಇತ್ತೀಚೆಗೆ ಡಿವಿಜಿ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯ ಹೇಳಿದ ಮಾತುಗಳಿವು. ತಾವು ಕಂಡಂತೆ ಡಿವಿಜಿ ಅವರನ್ನು ಹಿರಣ್ಣಯ್ಯ ಬಣ್ಣಿಸಿದ್ದು ಹೀಗೆ.
ಮುಖ್ಯ ಉಪನ್ಯಾಸಕ ಪ್ರೊ.ಜಿ.ಅಶ್ವತ್ಥನಾರಾಯಣ `ಡಿವಿಜಿ ವನಸುಮದ ಕವಿ. ಅವರು ಕನ್ನಡಿಗರಿಗೆ ಸಂಸ್ಕೃತ, ಧಾರ್ಮಿಕ ಸಾಹಿತ್ಯವನ್ನೂ ಉಪನಿಷತ್ತಿನ ಗೀತೆಯ ಸಾರವನ್ನೂ ಕಗ್ಗದಲ್ಲಿ ಇಳಿಸಿ ಜನಕ್ಕೆ ನೀಡಿದ ಭಗೀರಥ ಕವಿ ಎಂದು ಕೊಂಡಾಡಿದರು.
ಗಾಯಕ ಶಂಕರ್ ಶಾನಭೋಗ್ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗದ ಪದ್ಯಗಳನ್ನು ಹಾಡಿ ರಂಜಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಲಕ್ಷ್ಮಿನಾರಾಯಣ್, ಸುಷ್ಮಾ ಮೂರ್ತಿ, ರವೀಂದ್ರ ಗಣ್ಯರ ಮಾತುಗಳಿಗೆ ಕಿವಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.