ADVERTISEMENT

ತಾರೆಯರ ಪರಿಸರ ಪ್ರೇಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
-ಕಿಶೋರ್, ನಟ
-ಕಿಶೋರ್, ನಟ   

ನಾವು ವಾಸವಿರುವ ಮನೆಯ ಬಳಿ ಸಾಕಷ್ಟು ಮರಗಳನ್ನು ಬೆಳೆಸಿದ್ದೇನೆ. ಮನೆ ಕಟ್ಟುವ ಮುಂಚೆಯೇ ಇದ್ದ ಮಾವಿನ ಮರ ಮತ್ತು ಸೀಬೆ ಮರ ಕಡಿಯದೇ ಅದನ್ನು ಉಳಿಸಿ ಅವೂ ಮನೆಯ ಒಳಗೆ ಬರುವಂತೆ ಮನೆ ಕಟ್ಟಿದ್ದೇವೆ.

ಮನೆಯ ಬಳಿ ಲೀಚಿ ಮರ, ಬಾಳೆ, ವಾಟರ್ ಆ್ಯಪಲ್ ಮರಗಳಿವೆ, ಅದರ ಜೊತೆ, ಹೂವಿನ ಗಿಡ, ಸೊಪ್ಪುಗಳು ಬೆಳೆದ್ದಿದ್ದೇವೆ. ಮನೆಯ ಹಿಂದಿನ ಮೆಶ್‌ಗೆ ಸೋರೆ ಕಾಯಿ ಬಳ್ಳಿ ಹಬ್ಬಸಿದ್ದೆವು. ಈಗ ಕುಂಬಳ ಬಳ್ಳಿ ಹಬ್ಬಿಸಿದ್ದೇವೆ. ನಗರದಲ್ಲಿ ಬದುಕಿದ್ದರೂ ನಮ್ಮ ಸುತ್ತ ಹಸಿರು ಇರುವಂತೆ ನೋಡಿಕೊಂಡಿದ್ದೇವೆ.

ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳಿಂದ ಪ್ರೇರಣೆಗೊಂಡು ಬನ್ನೇರುಘಟ್ಟ ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸಮೀಪ ಕಾಡು ಕೃಷಿ ಮಾಡುವ ಪ್ರಯತ್ನ ಮಾಡಿದ್ದೇನೆ. ಹಣ್ಣು ಹೂವಿನ ಮರಗಳು, ವಿವಿಧ ರೀತಿಯ ಬಳ್ಳಿಗಳು ಆ ಕಾಡಿನಲ್ಲಿದೆ. ನಾನು ಮಾಡುತ್ತಿರುವ ಕೃಷಿಯಲ್ಲಿ ನೈಸರ್ಗಿಕ ಸಮತೋಲನ ತರುವ ಪ್ರಯತ್ನ ಮಾಡಿದ್ದೇನೆ.

ಪ್ರಕೃತಿಯನ್ನು ನಾವು ಉಳಿಸಬೇಕಾಗಿಲ್ಲ ನಾವು ಅದರ ತಂಟೆಗೆ ಹೋಗದಿದ್ದರೆ ಸಾಕು ಅದು ತಾನೇ ಉಳಿಯುತ್ತದೆ ಇದು ನಾನು ಕಂಡು ಕೊಂಡ ಸತ್ಯ. ಪ್ರಾಣಿಗಳನ್ನು ನೋಡಿ ನಡೆಯುವುದನ್ನು, ಹಾರುವುದನ್ನು ಎಲ್ಲವನ್ನೂ ಕಲಿತಿರುವ ಮನುಷ್ಯ ಅದರಂತೆ ಪ್ರಕೃತಿಯ ಜೊತೆಗೆ ಬದುಕುವುದನ್ನು ಕಲಿತಿಲ್ಲದಿರುವುದು ದುರ್ದೈವ.
-ಕಿಶೋರ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT