ADVERTISEMENT

`ದಿ.ನಂಜಮ್ಮ' ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ, ಎಂ.ವಿ.ಸೀ. ಸಂಶೋಧನಾ ಕೇಂದ್ರ ಹಾಗೂ ಅಜಂತಾ ಸಾಂಸ್ಕೃತಿಕ ವಿದ್ಯಾ ಸಂಸ್ಥೆ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ. ಬುಧವಾರ ಆಚಾರ್ಯ ಬಿ.ಎಂ.ಶ್ರೀ ಸಹೋದರಿ, ಧೀಮಂತ ಮಹಿಳೆ `ದಿ.ನಂಜಮ್ಮ' ಕೃತಿ ಬಿಡುಗಡೆ.

ಲೇಖಕರು: ಲಕ್ಷ್ಮೀ ಎನ್.ಮೂರ್ತಿ. ಉದ್ಘಾಟನೆ: ಸಂಶೋಧಕ ಡಾ. ಸೂರ್ಯನಾಥ ಕಾಮತ್, ಕೃತಿ ಲೋಕಾರ್ಪಣೆ: ವಿದ್ವಾಂಸ ಡಾ. ಎಂ.ಚಿದಾನಂದ ಮೂರ್ತಿ. ಅಧ್ಯಕ್ಷತೆ: ಸಮಾಜ ಸುಧಾರಕರು ಎನ್.ಜಿ.ಸುಶೀಲಮ್ಮ, ವಿಶೇಷ ಆಹ್ವಾನಿತರು: ಸಂಶೋಧಕರಾದ ಡಾ. ಜಯಂತಿ ಮನೋಹರ್. ಅತಿಥಿಗಳು: ಸಾಹಿತಿಗಳಾದ ಡಾ. ಸುಮಿತ್ರಾ ಬಾಯಿ, ಡಾ. ನಿರುಪಮಾ, ಆರ‌್ಯಾಂಬಾ ಪಟ್ಟಾಭಿ, ಸಮಾಜ ಸೇವಕಿ ಸರೋಜ ವಿ.ನಾಯ್ಡು, ಡಾ.ಸೌಭಾಗ್ಯ ಕುಲಕರ್ಣಿ, ಎನ್.ಎಸ್.ಸ್ವಾಮಿ. ಸಂಜೆ 4.

ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ. ಬೆಳಿಗ್ಗೆ 9ಕ್ಕೆ ಪ್ರತಿಭಾ ಸಂಗಮ, ಸಾಹಿತ್ಯ, ಸಂಸ್ಕೃತಿ ಸಿಂಚನ ಹಾಗೂ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅತಿಥಿಗಳು- ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ್, ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಟಿ.ಶಿವಶಂಕರ್, ಡಿ.ಆರ್.ಜಿ. ಇನ್ಫೋಟೆಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಹರೀಶ್, ಬಿ.ಜಿ.ಚಂದ್ರೇಗೌಡ, ಆಚಾರ್ಯ ನಿರಂಜನ ಮೂರ್ತಿ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯೋಗ, ಭರತನಾಟ್ಯ, ಕೂಚಿಪುಡಿ, ಜಾನಪದ ನೃತ್ಯ, ನಟನೆ, ಸಂಗೀತ, ವೀಣಾವಾದನ ಹಾಗೂ ಯುರೋಪಿನ ನೃತ್ಯ ಕಲಾವಿದರಾದ ಜಾನ್ ಮತ್ತು ಡ್ಯಾನಿಯಲ್ ಅವರಿಂದ ಸ್ಪ್ಯಾನಿಶ್ ನೃತ್ಯ ಪ್ರದರ್ಶನ. 

ಪ್ರಶಸ್ತಿ ಪುರಸ್ಕಾರ ಸಮಾರೋಪ ಸಮಾರಂಭ: ಅತಿಥಿಗಳು: ಲಯನ್ ಬಿ.ಟಿ.ಮುನಿಯಪ್ಪ, ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಉಪಾಧ್ಯಕ್ಷೆ ಸರೋಜ ವಿ ನಾಯ್ಡು. ಕಲಾ ಪೋಷಕರಾದ ಕುಸುಮ ಮತ್ತು ನಾರಾಯಣಾಚಾರ್, ಡಾ. ಶ್ರೀನಿವಾಸ ಮೂರ್ತಿ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.