ADVERTISEMENT

ದ್ರೌಪದಿ ಅಗ್ನಿಕುಂಡ ಉತ್ಸವ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST
ದ್ರೌಪದಿ ಅಗ್ನಿಕುಂಡ ಉತ್ಸವ
ದ್ರೌಪದಿ ಅಗ್ನಿಕುಂಡ ಉತ್ಸವ   

ಶ್ರೀ ದ್ರೌಪದಿ ಅಮ್ಮನ್ ಅಗ್ನಿ ಚಲನಾ ಭಕ್ತರ ಸಂಘ: ಭಾನುವಾರ 40ನೇ ವರ್ಷದ ದ್ರೌಪದಿ ಅಮ್ಮನ್ ಅಗ್ನಿ ಚಾಲನಾ ಮಹೋತ್ಸವ ಸಮಾರಂಭ.

ಸುಮಾರು 500 ವರ್ಷಗಳ ಇತಿಹಾಸವಿರುವ ಈ ಹಬ್ಬವನ್ನು ನಗರದ  ದಂಡು ಪ್ರದೇಶದಲ್ಲಿರುವ ಭಕ್ತರು ಆಚರಿಸಿಕೊಂಡು ಬರುತ್ತಿದ್ದಾರೆ.

ಹಿನ್ನೆಲೆ: ಮುತ್ಯಾಲಮ್ಮ ಮತ್ತು ದ್ರೌಪದಿ ದೇವಿಯ ಪೂಜೆಯನ್ನು ಒಳಗೊಂಡ ಈ ಹಬ್ಬದ ವೈಶಿಷ್ಟ್ಯವೆಂದರೆ ಇಲ್ಲಿ ಸುಮಾರು 20 ಅಡಿ ಆಳದ ಗುಂಡಿ ನಿರ್ಮಿಸಲಾಗುತ್ತದೆ. ಅದರಲ್ಲಿ ಪಂಚಪಾಂಡವರನ್ನು ಇಟ್ಟು ಪೂಜೆ ಮಾಡಿ ಕೆಂಡ ಹಾಕಲಾಗುತ್ತದೆ. ಮೊದಲು ಕೈಯಿಂದ ಕೆಂಡವನ್ನು ತೆಗೆದುಕೊಂಡು ಮೂರು ಸುತ್ತು ಪ್ರದಕ್ಷಿಣೆ ಬರುತ್ತಾರೆ. ನಂತರ ಹರಕೆ ಹೊತ್ತ ಭಕ್ತರು ಅಗ್ನಿಕುಂಡದ ಮೇಲೆ ನಡೆಯುತ್ತಾರೆ.

ADVERTISEMENT

ಉದ್ಘಾಟನೆ: ಪಿ.ಸಿ.ಮೋಹನ್. ಸ್ಥಳ: ಆರ್‌ಬಿಎಎನ್‌ಎಸ್ ಮೈದಾನ, ಗಂಗಾಧರ್ ಚೆಟ್ಟಿ ರಸ್ತೆ. ಸಂಜೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.