ADVERTISEMENT

ನಾಟ್ಯಶ್ರುತಿ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST

`ನಾಟ್ಯಶ್ರುತಿ~ ಸಂಸ್ಥೆಯು ಇತ್ತೀಚೆಗೆ ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಕೋರಮಂಗಲದಲ್ಲಿನ ಸೇಂಟ್ ಫ್ರಾನ್ಸಿಸ್ ಸ್ಕೂಲ್ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಿತು. ಸಂಸ್ಥೆಯ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅದರಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರ್ತಿ ಹಾಗೂ ಭರತನಾಟ್ಯ ಕಲಾವಿದೆಯೂ ಆಗಿರುವ ಸುಮಿತ್ರಾ ನಿತಿನ್ ಸ್ಥಾಪಿಸಿದ ಸಂಸ್ಥೆ `ನಾಟ್ಯಶ್ರುತಿ~. ಸುಮಿತ್ರಾ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಸಂಗೀತ ಎರಡನ್ನೂ ಕಲಿಸುತ್ತಾರೆ.

 

 ಸೂಚನೆ
ನಗರದಲ್ಲಿ ಇಂದು ಹಾಗೂ ಸಾಂಸ್ಕೃತಿಕ ಮುನ್ನೋಟಕ್ಕೆ ಕಾರ್ಯಕ್ರಮಗಳ ವಿವರಗಳನ್ನು ನಿಗದಿತ ದಿನಕ್ಕಿಂತ ಕನಿಷ್ಠ ಎರಡು ದಿನ ಮುಂಚೆ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಪೂರಕ ಚಿತ್ರಗಳನ್ನೂ ಕಳುಹಿಸಬಹುದು. ನುಡಿ ಅಥವಾ ಬರಹ ತಂತ್ರಾಂಶ ಉಪಯೋಗಿಸಿ.
ಇ- ಮೇಲ್ ಮೂಲಕವೂ ವಿವರಗಳನ್ನು ಕಳುಹಿಸಬಹುದು. ಮೆಟ್ರೊ ಇ-ಮೇಲ್: metropv@prajavani.co.in
                               
-ಸಂ

ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಪೂರ್ಣ ಸಮನ್ವಯದೊಂದಿಗೆ ತಂಡಗಳಲ್ಲಿ ಪ್ರದರ್ಶಿಸಿದ ನೃತ್ಯ ಪ್ರಸಂಗಗಳು ಕಣ್ಣು ಕಿವಿಗಳಿಗೆ ಹಬ್ಬವನ್ನುಂಟು ಮಾಡಿದವು. ಹಾಡುಗಾರಿಕೆಯನ್ನು ಕಲಿಯುತ್ತಿರುವ ಮಕ್ಕಳು `ನಮ ರಾಮಾಯಣ~, `ಜಗದಾನಂದಕರ~, `ಧರಣಿ ತೆಲುಸುಕೊಂಟಿ~ ಮೊದಲಾದ ಜನಪ್ರಿಯ ಕೀರ್ತನೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

ನೃತ್ಯ ಕಲಾವಿದರು ಪುಷ್ಪಾಂಜಲಿ, ಅಲರಿಪ್ಪು ದೇವರನಾಮ ಮತ್ತು ಉತ್ತುಕ್ಕಡು ವೆಂಕಟಕವಿಯ ಸಪ್ತರತ್ನ `ಜಟಾಧರ ಶಂಕರ~ವನ್ನು ಲಾಲಿತ್ಯಪೂರ್ಣವಾಗಿ ಪ್ರಯೋಗಿಸಿದರು. ಹಿರಿಯ ಗುರುಗಳಾದ ವಿದುಷಿ ನೀಲಾ ರಾಮ್‌ಗೋಪಾಲ್ ಮತ್ತು ಗುರು ಬಿ ಭಾನುಮತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.