ADVERTISEMENT

ನಾಳೆ ಕೆ 10 ಮ್ಯಾರಥಾನ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST
ನಾಳೆ ಕೆ 10 ಮ್ಯಾರಥಾನ್
ನಾಳೆ ಕೆ 10 ಮ್ಯಾರಥಾನ್   

ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾನುವಾರ `ಟಿಸಿಎಸ್ ವಿಶ್ವ 10ಕೆ ಓಟ~ ಮ್ಯಾರಥಾನ್ ನಡೆಯಲಿದೆ. ಈ ಸಲದ ಮ್ಯಾರಥಾನ್‌ನಲ್ಲಿ ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ.

ಕಳೆದ ಬಾರಿಯ ಚಾಂಪಿಯನ್ ಸುನಿಲ್ ಕುಮಾರ್, ರಾಷ್ಟ್ರೀಯ ಕ್ರೀಡಾಕೂಟದ ಪದಕ ವಿಜೇತ ಸುರೇಶ್ ಕುಮಾರ್, ಕಳೆದ ಬಾರಿಯ ರನ್ನರ್ ಅಪ್ ಅರವಿಂದ ಕುಮಾರ್, 2008ರ ಚಾಂಪಿಯನ್ ಕಾಶಿನಾಥ್ ಅಸವಾಳೆ ಸೇರಿಂದತೆ ಇತರ ಪ್ರಮುಖ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

 ತವರು ನೆಲದಲ್ಲಿಯೇ ಮ್ಯಾರಥಾನ್ ನಡೆಯಲಿರುವದಿಂದ ಭಾರತ ಪ್ರಶಸ್ತಿ ಗೆಲ್ಲುವ ಆಶಯದಲ್ಲಿದೆ. ಆದ್ದರಿಂದಲೇ ಭಾರತ ಬಲಿಷ್ಠ ತಂಡವೇ ಕಳಕ್ಕಿಳಿಯಲಿದೆ. ಮಹಿಳೆಯರ ವಿಭಾಗದಲ್ಲಿ ಸ್ಥಳೀಯ ಪ್ರತಿಭೆ ಪ್ರೀತಿ ಎಲ್. ರಾವ್, ಕವಿತಾ ರಾವತ್ ಹಾಗೂ ಸುಧಾ ಸಿಂಗ್ ಭಾಗವಹಿಸಲಿದ್ದಾರೆ.

ಮೊದಲ ಹತ್ತರಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳಿಗೆ ತಲಾ ಎರಡು ಲಕ್ಷ ರೂಪಾಯಿ ಬಹುಮಾನವಿದೆ. ಮಹಿಳೆಯರ ವಿಭಾಗದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಎಂ. ಸುಧಾ, ಮುಂಬೈ ಮ್ಯಾರಥಾನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಿಯಾಂಕ ಸಿಂಗ್ ಸೇರಿದಂತೆ ಸಾಕಷ್ಟು ಪ್ರತಿಭೆಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ರನ್ ಇನ್ ಕಾಸ್ಟ್ಯೂಮ್
ಬೆಂಗಳೂರಿಗರು ವೀಕೆಂಡ್ ಅನ್ನು ರಂಜನೀಯವಾಗಿ ಕಳೆಯಲು ಅನುವಾಗುವಂತೆ ಕಿಂಗ್‌ಫಿಶರ್ ಇದೇ ಭಾನುವಾರದಂದು `ಕಾಸ್ಟ್ಯೂಮ್ ಸ್ಟ್ರೀಟ್ ಪಾರ್ಟಿ~ಯನ್ನು ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಾಥಾನ್ ಅಂಗವಾಗಿ  ಆಯೋಜಿಸಿದೆ.

ಇಲ್ಲಿ ಯಾವುದೇ ಸ್ಪರ್ಧಿ ಆಕರ್ಷಕ, ವೈವಿಧ್ಯಮ, ತಮ್ಮ ಕಲ್ಪನೆಗೆ ಅನುಗುಣವಾದ ವೇಷಭೂಷಣಗಳನ್ನು ತೊಟ್ಟು `ಕಿಂಗ್‌ಫಿಶರ್ ರನ್ ಇನ್ ಕಾಸ್ಟ್ಯೂಮ್~ನಲ್ಲಿ ಪಾಲ್ಗೊಂಡು ಸಂತಸ ಪಡಬಹುದು. ಇಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ವಸ್ತ್ರ ವಿನ್ಯಾಸದ ಸೃಜನಶೀಲತೆಯನ್ನು ಖ್ಯಾತ ವಸ್ತ್ರ ವಿನ್ಯಾಸಕಾರರು ಮೆಚ್ಚಿಕೊಂಡು ಭೇಷ್ ಅಂದರೆ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನ ಸಹ ದೊರೆಯಲಿದೆ.

ವಿಜೇತರನ್ನು `ಕಿಂಗ್‌ಫಿಶರ್ ಸಖತ್ ಬೆಂಗಳೂರಿಯನ್~ ಮತ್ತು ಕಿಂಗ್‌ಫಿಶರ್ ಬೊಂಬಾಟ್ ಬ್ರಿಗೇಡ್~ ಎಂದು ಗುರುತಿಸಿ ಎರಡು ವಿಭಾಗದಲ್ಲಿ ಬಹುಮಾನ ನೀಡಲಾಗುವುದು.

`ನಾವು ಸಮಾಜದಲ್ಲಿ ಉತ್ತಮ ಅಂಶಗಳು, ಹೊಸ ಹೊಸ ಕಲ್ಪನೆಗಳನ್ನು ಪ್ರೊತ್ಸಾಹಿಸಲು ಸದಾ ಸಿದ್ಧ. ಮ್ಯಾರಥಾನನ್ನು ರಂಜನೀಯವಾಗಿಸುವ ಉದ್ದೇಶದಿಂದ `ರನ್ ಇನ್  ಕಾಸ್ಟ್ಯೂಮ್~ ಆಯೋಜಿಸಿದ್ದೇವೆ. ಈ ಮೂಲಕ ಸ್ಪರ್ಧಿಗಳ ಮುಖದಲ್ಲಿ ಮಂದಹಾಸ ಮೂಡಿಸಲು ಭರ್ಜರಿಯಾಗಿ ತಯಾರಾಗಿದ್ದೇವೆ~ ಎಂಬುದು ಯುಬಿ ಲಿಮಿಟೆಡ್‌ನ ಸಮರ್ ಸಿಂಗ್ ಶೆಖಾವತ್ ಅಂಬೋಣ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.