ADVERTISEMENT

ನಾಳೆ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಶ್ರೀ ವರಸಿದ್ಧಿ ವಿನಾಯಕ ದೇವಾಲಯ: ಶುಕ್ರವಾರ (ಮಾ.23) ಚಾಂದ್ರಮಾನ ಯುಗಾದಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 7ಕ್ಕೆ ಪಂಚಾಮೃತ ಅಭಿಷೇಕ ಮತ್ತು ರುದ್ರಾಭಿಷೇಕ. ನಂತರ ಮಹಾಮಂಗಳಾರತಿ. ಬೇವು ಬೆಲ್ಲ ವಿತರಣೆ.

ಸಂಜೆ 6ಕ್ಕೆ ನಂದನ ಸಂವತ್ಸರದ ಪಂಚಾಂಗ ಶ್ರವಣ. ನಂತರ ಗಾನ ಸೌರಭ ಯಕ್ಷಮೇಳದ ಕಲಾವಿದರಿರಂದ `ಚಂದ್ರಹಾಸ ಚರಿತ್ರೆ~ ಯಕ್ಷಗಾನ ಪ್ರದರ್ಶನ (ನಿರ್ದೇಶನ: ಬೇಗಾರ್ ಶಿವಕುಮಾರ್).

ಸ್ಥಳ: ಕೆನರಾಬ್ಯಾಂಕ್ ಕಾಲೊನಿ, ನಾಗರಬಾವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.