ADVERTISEMENT

ಪಂಚಾಮೃತದ ಸಂಗೀತ ಇಂಚರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ತಿಂಗಳ ಸರಣಿ ಕಾರ್ಯಕ್ರಮ `ಇಂಚರ 21' ಸಂಗೀತ ಕಾರ್ಯಕ್ರಮವನ್ನು ದೊಡ್ಡಬೊಮ್ಮಸಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿತ್ತು.

ಪೂರ್ಣಿಮಾ ಪ್ರಸಾದ್ ಅವರು `ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ', `ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು' (ಕೆ.ಎಸ್.ನರಸಿಂಹಸ್ವಾಮಿ), `ಯಾರಿವರು ಯಾರಿವರು' (ಜಿ.ಎಸ್.ಎಸ್.), `ಮಾಮರದ ತಂಪಿಗೆ ಕೂತಿರುವ ಗಿಳಿಗಳೆ' (ಜನಪದ) ಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋವಿಂದ ಆರ್. ಜೋಶಿ ಅವರು `ಬಾರೆ ಭಾಗ್ಯದ ನಿಧಿಯೆ ಕರವೀರಪುರ ನಿವಾಸಿನಿ ದೊರೆಯೆ' (ಭಕ್ತಿಗೀತೆ), `ನನ್ನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ' (ದ.ರಾ.ಬೇಂದ್ರೆ) ಸೇರಿದಂತೆ ಅನೇಕ ಗೀತೆಗಳನ್ನು ಹಾಡಿ ರಂಜಿಸಿದರು.

ಸಂಸ್ಥೆಯ ಸಂಸ್ಥಾಪಕಿ ಗಾಯತ್ರಿ ಕೇಶವ ಮೂರ್ತಿ ಅವರು ಡಿ.ವಿ.ಜಿ ಅವರ ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ `ಏನೀ ಮಹಾನಂದವೇ ಓ ಭಾಮಿನಿ' ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಎಸ್.ಅಭಿಜಿತ್ (ಹಾರ್ಮೋನಿಯಂ), ಎಂ.ಗುರುನಂದನ್ ರಾವ್ (ತಬಲಾ) ವಾದ್ಯ ಸಹಕಾರ ನೀಡಿದರು. 

ಗಾಯಕ ಅನಂತ ಬೆಳವಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ವಿ.ಮಲ್ಲಿಕಾರ್ಜುನಯ್ಯ, ಸಂಸ್ಥೆ ಸಹ ಕಾರ್ಯದರ್ಶಿ ಜಿ.ಮಹೇಶ್ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.