ADVERTISEMENT

ಪಂಜಾಬಿ ಸಾಂಪ್ರದಾಯಿಕ ರುಚಿ

ನೇಸರ ಕಾಡನಕುಪ್ಪೆ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಪಂಜಾಬಿ ಸಾಂಪ್ರದಾಯಿಕ ರುಚಿ
ಪಂಜಾಬಿ ಸಾಂಪ್ರದಾಯಿಕ ರುಚಿ   

ಪಂಜಾಬ್ ಆಹಾರ ಪದ್ಧತಿಯಲ್ಲಿ ಮಾಂಸಾಹಾರ ಖಾದ್ಯಗಳಷ್ಟೇ ಪ್ರಾಮುಖ್ಯತೆಯನ್ನು ಸಸ್ಯಾಹಾರಿ ಖಾದ್ಯಗಳಿಗೂ ನೀಡಲಾಗಿದೆ. ಚಿಕನ್‌ ಟಿಕ್ಕದ ರೀತಿಯಲ್ಲಿಯೇ ಆಲೂ, ಸೋಯಾಬೀನ್‌, ಪನೀರ್‌ ಬಳಸಿ ರುಚಿಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಯಶವಂತಪುರದ ‘ತಾಜ್‌’ ಹೋಟೆಲಿನಲ್ಲಿ ಜೂನ್‌ 9ರವರೆಗೆ ‘ಪರಾಂದಾ’ ಪಂಜಾಬಿ ಆಹಾರೋತ್ಸವ ನಡೆಯುತ್ತಿದೆ. ಪಂಜಾಬಿನ ವಿಶಿಷ್ಟ ರುಚಿಯನ್ನು ಅನುಭವಿಸಲು ಇದೊಂದು ಸುವರ್ಣ ಅವಕಾಶ.

ಪಂಜಾಬ್‌ ಮೂಲದ ಶೆಫ್‌ ಬಲ್ಜಿಂದರ್ ಸಿಂಗ್‌ ಪಂಜಾಬಿ ಆಹಾರೋತ್ಸವದ ಉಸ್ತುವಾರಿ ವಹಿಸಿದ್ದಾರೆ. ಮರೆತು ಹೋದ ಪಂಜಾಬಿ ರೆಸಿಪಿಗಳನ್ನು ಮತ್ತೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕೆಂದೇ ಈ ಆಹಾರೋತ್ಸವ ವಿಶೇಷವಾಗಿದೆ ಎನ್ನುತ್ತಾರೆ ಅವರು.

ಸ್ವಾತಂತ್ರ್ಯಪೂರ್ವದಲ್ಲಿ ತಯಾರಿಸುತ್ತಿದ್ದ, ಈಗ ಮರೆತೇ ಹೋಗಿರುವ ಕೆಲವು ಪಂಜಾಬಿ ಸಾಂಪ್ರದಾಯಿಕ ರೆಸಿಪಿಗಳು ಈ ಉತ್ಸವದಲ್ಲಿ ವಿಶೇಷವಾಗಿ ಪರಿಚಯಿಸಲಾಗುತ್ತಿದೆ ಎಂದು ಮುಖ್ಯ ಶೆಫ್‌ ಸೆಲ್ವರಾಜ್‌ ಹೇಳಿದರು. ಆಲೂ ಪರಾಟದ ರೀತಿಯಲ್ಲಿಯೇ ತಯಾರಿಸುವ ಕುಲ್ಚಾವನ್ನು ಸವಿಯಲೇಬೇಕು ಎಂಬ ತಾಕೀತು ಅವರದ್ದು. ಸ್ವಾತಂತ್ರ್ಯಪೂರ್ವದಲ್ಲಿ ಪಂಜಾಬಿನ ವಿಶೇಷ ಮಸಾಲೆಗಳನ್ನು ಬಳಸಿ ತಯಾರಿಸುತ್ತಿದ್ದ ಸಾಂಪ್ರದಾಯಿಕ ಖಾದ್ಯಗಳು ಈಗ ಪಂಜಾಬಿಗರಿಗೇ ಮರೆತಿದೆ. ಅವುಗಳನ್ನು ಮತ್ತೆ ನೆನಪಿಸುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರಿನಲ್ಲಿ ಪಂಜಾಬಿ ಆಹಾರಪ್ರೇಮಿಗಳು ಬಹಳ ಜನ ಇದ್ದಾರೆ. ಅವರಿಗೆ ಈ ಖಾದ್ಯಗಳನ್ನು ಅರ್ಪಿಸುತ್ತೇವೆ ಎಂದು ಸೆಲ್ವರಾಜು ವಿವರಿಸಿದರು.

ADVERTISEMENT

ಶಿಕಂಜಿ, ತಂಡೈ, ಕೇಸರ್‌ವಾಲಿ ಲಸ್ಸಿ, ಮಸಾಲಾ ಛಾಂಚ್‌(ಮಜ್ಜಿಗೆ), ಭುನೆ ಆಮ್‌ ಪನ್ನ, ಚಾಟ್‌ಗಳಲ್ಲಿ ಪಟಿಯಾಲಿ ಕಚೋರಿ ಚಾಟ್‌, ದಹಿ ಭಲ್ಲ, ಕುರ್‌ಕುರೆ ಆಲೂ ಚಾಟ್‌ ಇವು ಪಂಜಾಬ್‌ನ ಸಾಂಪ್ರದಾಯಿಕ ಖಾದ್ಯಗಳು ಈ ಆಹಾರೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುವ ಕುಲ್ಚಾ, ಪರಾಟ, ನಾನ್‌, ಲಸ್ಸಿಗಳನ್ನು ಸವಿಯುವ ಅವಕಾಶ ಈ ಉತ್ಸವದಲ್ಲಿ ಲಭ್ಯ.

(ಪಂಜಾಬಿ ಬಾಣಸಿಗ ಬಲ್ಜಿಂದರ್ ಸಿಂಗ್‌, ಮುಖ್ಯ ಬಾಣಸಿಗ ಸೆಲ್ವರಾಜು, ಕಿರಿಯ ಬಾಣಸಿಗ ಆಶಿಷ್‌)

ಪಂಜಾಬ್‌ ಆಹಾರ ಎಂದ ಕೂಡಲೇ ಲಸ್ಸಿ ಇರಲೇಬೇಕು. ಬಾದಾಮಿ ಹಾಕಿ ತಯಾರಿಸಿದ ಗಟ್ಟಿ ಲಸ್ಸಿ ಒಂದು ಲೋಟ ಕುಡಿದರೆ ಹಸಿವೇ ಇರದು. ಹಾಗಂತ ಆಹಾರೋತ್ಸವದಲ್ಲಿ ಮೊದಲೇ ಈ ಲಸ್ಸಿ ಕುಡಿದರೆ ಉಳಿದ ಖಾದ್ಯ ಸವಿಯಲು ಅಡ್ಡಿಯಾಗಬಹುದು. ಮಸಾಲೆ ಮಜ್ಜಿಗೆ ಕೂಡಾ ಇಲ್ಲಿನ ವಿಶೇಷ ವೆಲ್‌ಕಂ ಡ್ರಿಂಕ್‌. ಇನ್ನು ಊಟದ ಕೊನೆಯಲ್ಲಿ ನೂಡಲ್ಸ್‌, ಬಾದಾಮಿ ಚೂರು ಹಾಕಿದ ಪಂಜಾಬಿನ ವಿಶೇಷ ಕುಲ್ಫಿ ಸವಿದರೆ ಸಂತೃಪ್ತಿ. ಪಟಿಯಾಲ ಕಚೋರಿ ಚಾಟ್‌, ದಹಿ ಭಲ್ಲ, ಕುರ್‌ಕುರೆ ಆಲೂ ಚಾಟ್‌ ಕೂಡಾ ಆಹಾರೋತ್ಸವದ ವಿಶೇಷ.

ಸಸ್ಯಾಹಾರ ಮೆನು: ತವಾ ಪನೀರ್‌ ಖಟಾ ಪ್ಯಾಝ್, ಖಾಡೆ ಮಸಾಲೆ ಕೆ  ಪನೀರ್, ಆಲೂ ವಡಿ ರಸ್ಸಾ, ಬೈಂಗನ್‌ ದ ಭರ್ತಾ, ಮಕೈ ದಿ ರೋಟಿ, ಲಸೂನಿ ಪಾಲಕ್‌, ಕಡೈ ಸಬ್ಜಿ. ಸ್ಟಾರ್ಟರ್‌ಗಳಲ್ಲಿ ಪಾಲಕ್‌ ದಹಿ ಕಬಾಬ್‌, ಸೋಯಾಬೀನ್‌ ಚಾಪ್‌, ಪನೀರ್‌ ಟಿಕ್ಕ, ಅಕ್ರೋಟ್ ಔರ್‌ ಪರ್ವಾಲ್‌ ಕೆ ಚಂಪ್‌, ಸುರ್ಕ್‌ ಲಾಲ್‌ ಬಾದಾಮಿ ಆಲೂ, ಭುಟ್ಟೇ ಕೆ ಕಬಾಬ್‌.

ಮಾಂಸಾಹಾರ ಮೆನು: ಜಲಂಧರಿ ಶೀಖ್‌ ಕಬಾಬ್‌, ಚಂಪ್ ಲುಧಿಯಾನ್ವಿ, ಲಹ್ಸೂನಿ ಜೀಂಗಾ, ಅಮೃತ್ಸರಿ ಮಚ್ಚಿ, ಹರಿ ಕೆ ಪಟ್ಟನ್ ದೆ ಮಚ್ಚಿ ಕಬಾಬ್‌, ಭಟ್ಟಿ ದ ಮುರ್ಗ್‌, ಚಾಂಪ್ –ಇ–ಮುರ್ಗ್‌, ಬೀರಾ ದ ಮುರ್ಗ್‌ ಟಿಕ್ಕ, ಮುರ್ಗ್‌ ಮಕ್ಕನ್ವಾಲಾ, ಮುರ್ಗ್‌ ತರಿವಾಲಾ, ಸರ್ಸೋಂವಾಲಿ ಮಚ್ಛಿ, ರಗ್ಡಾ ಝಿಂಗ, ಪರಾಟಿ ಗೋಷ್‌, ಮಸಾಲೆವಾಲಿ ಚಾಂಪ್‌, ಗುರ್ದಾ ಕೀಮಾ, ಮೀಟ್‌ ಬೆಲಿರಾಮ್‌. 

ಸ್ಥಳ: ತಾಜ್‌, ಯಶವಂತಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.