ADVERTISEMENT

ಪರಿಕ್ರಮದಲ್ಲಿ ಮಹಿಳಾ ದಿನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST
ಪರಿಕ್ರಮದಲ್ಲಿ ಮಹಿಳಾ ದಿನ
ಪರಿಕ್ರಮದಲ್ಲಿ ಮಹಿಳಾ ದಿನ   

ಜಯನಗರದಲ್ಲಿರುವ ಪರಿಕ್ರಮ ಶಾಲೆಯಲ್ಲಿ ಮಾರ್ಚ್ 8 ಎಂದಿನಂತಿರಲಿಲ್ಲ. ಟಿಮ್‌ಕೆನ್‌ನ ಮಹಿಳೆಯರು ಬಂದು ಅಲ್ಲಿಯ ಮಕ್ಕಳೊಂದಿಗೆ ಆಟ, ಆಟದೊಂದಿಗೆ ಪಾಠ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. `ಟೀಚ್ ಅಂಡ್ ಟೆಕ್~ ಕಾರ್ಯಕ್ರಮ ನಡೆಸಿಕೊಟ್ಟರು.

ಯುಕೆಜಿಯಿಂದ 5ನೇ ತರಗತಿ ವರೆಗಿನ ಮಕ್ಕಳು ಇವರೊಂದಿಗೆ ನಲಿದರು. ಚಿತ್ರ ಬರೆಯುವುದು, ಬಣ್ಣ ಹಾಕುವುದು ಮುಂತಾದ ಕೆಲಸಗಳಿಂದ ಖುಷಿ ಪಟ್ಟರು.  ಮಕ್ಕಳಿಗೆ ಕಸೂತಿ ಹೇಳಿಕೊಡಲಾಯಿತು.

ಕರಕುಶಲ ಕೆಲಸದ ನಂತರ ಮಕ್ಕಳ ಕಲ್ಪನಾ ಶಕ್ತಿ ಹೆಚ್ಚಿಸಲು ಕತೆ ಹೇಳಲಾಯಿತು. ಭಾಷಾ ಕೌಶಲಕ್ಕಾಗಿ  ಸ್ಪೆಲ್ ಬಿ, ವರ್ಡ್ ಬಿಲ್ಡಿಂಗ್, ಪಿಕ್ ಆ್ಯಂಡ್ ಸ್ಪೀಕ್, ಪಬ್ಲಿಕ್ ಸ್ಪೀಕಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಆರೋಗ್ಯ ಮತ್ತು ಸುರಕ್ಷತೆ, ಪ್ರಕೃತಿ ಮತ್ತು ಪರಿಸರದ ಕುರಿತು ರಸಪ್ರಶ್ನೆ ಏರ್ಪಡಿಸಲಾಗಿತ್ತು.ಟಿಮ್‌ಕೆನ್ ಕಾರ್ಯವನ್ನು ಶ್ಲಾಘಿಸಿದ ಪರಿಕ್ರಮ ಶಾಲೆಯ ಸಿಇಒ ಮತ್ತು ಸಂಸ್ಥಾಪಕಿ ಶುಕ್ಲಾ ಬೋಸ್, ಪರಿಕ್ರಮದಲ್ಲಿ ಲಿಂಗ ತಾರತಮ್ಯವಿಲ್ಲ.

ಇಲ್ಲಿ ಶೇ.50ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಈ ಹುಡುಗಿಯರಿಗೆ ಶಾಲೆ ಮತ್ತು ಕಾಲೇಜಿಗೆ ಹೋಗಲು ಬೆಂಬಲ ನೀಡುತ್ತೇವೆ. ಅವರ ಪರಿಸ್ಥಿತಿ ಸುಧಾರಿಸಲು ಮಕ್ಕಳ ತಾಯಂದಿರಿಗೆ ಸಾಂದರ್ಭಿಕ ತರಬೇತಿ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಟಿಮ್‌ಕೆನ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ದಾಸ್, `ಸಾಮಾಜಿಕ ಜವಬ್ದಾರಿ ನಮ್ಮ ಕಂಪೆನಿಗೆ ಮಹತ್ವದ್ದು.
ಈ ಮಕ್ಕಳ ಕಲಿಕೆಯ ಪಯಣದಲ್ಲಿ ಭಿನ್ನತೆ ಕಾಣುವಲ್ಲಿ ನಾವು ಯಶಸ್ವಿಯಾಗಿದ್ದೇವೆ~ ಎಂದರು.
   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.