ADVERTISEMENT

ಪಿಕ್ಸ್‌ನ ತ್ರಿ ಮಸ್ಕೆಟಿಯರ್ಸ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST
ಪಿಕ್ಸ್‌ನ ತ್ರಿ ಮಸ್ಕೆಟಿಯರ್ಸ್
ಪಿಕ್ಸ್‌ನ ತ್ರಿ ಮಸ್ಕೆಟಿಯರ್ಸ್   

ಪಿಕ್ಸ್ ದೇಶದ ಉತ್ಕ್ರಷ್ಟ ಹಾಲಿವುಡ್ ಚಲನಚಿತ್ರಗಳ ಚಾನೆಲ್. ಹಾಲಿವುಡ್ ಚಿತ್ರಗಳಲ್ಲದೇ, ಚಿತ್ರ ತಾರೆಯರ ಕುರಿತ ಮಾಹಿತಿ, ಚಲನಚಿತ್ರ ಸೆಟ್, ಶೂಟಿಂಗ್ ವಿವರಗಳ ಕುರಿತಾದ ಕಾರ್ಯಕ್ರಮಗಳನ್ನು ನಿಯಮಿತವಾಗಿ ಪ್ರಸಾರ ಮಾಡುತ್ತಿದೆ. ಹಾಲಿವುಡ್ ಸೂಪರ್‌ಸ್ಟಾರ್ ವಿಲ್ ಸ್ಮಿತ್ ಐದು ವರ್ಷಗಳ ಹಿಂದೆ ಈ ಚಾನೆಲ್ ಉದ್ಘಾಟಿಸಿದ್ದರು.

ಸ್ಲಮ್‌ಡಾಗ್ ಮಿಲೇನಿಯರ್, ಹರ್ಟ್ ಲಾಕರ್, ಕರಾಟೆ ಕಿಡ್, ಬುಕ್ ಆಫ್ ಎಲಿ ಇತ್ಯಾದಿ ಸುಪ್ರಸಿದ್ಧ ಹಾಲಿವುಡ್ ಚಿತ್ರಗಳನ್ನು ಬಿಡುಗಡೆಯಾದ ಕೆಲ ದಿನಗಳಲ್ಲೇ ಪ್ರಸಾರ ಮಾಡಿದ ಖ್ಯಾತಿ ಅದರದ್ದು.

ಪಿಕ್ಸ್ ಈಗ ಚಲನಚಿತ್ರ ಪ್ರಿಯ ವಿದ್ಯಾರ್ಥಿಗಳಿಗೆ ಹೊಸದೊಂದು ಅವಕಾಶ ಕಲ್ಪಿಸಿದೆ. ಬೆಂಗಳೂರು, ದೆಹಲಿ, ಮುಂಬೈನ `ಪಿಕ್ಸ್ ಮೂವಿ ಕ್ಲಬ್~ನ ವಿದ್ಯಾರ್ಥಿ ಸದಸ್ಯರು ಹೊಸ ಹಾಲಿವುಡ್ ಚಿತ್ರಗಳನ್ನು ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

ಪಿಕ್ಸ್ ಮೂವಿ  ಕ್ಲಬ್ ವಿದ್ಯಾರ್ಥಿ ಸದಸ್ಯರಾಗಲು ನೀವು ಮಾಡಬೇಕಾಗಿದ್ದು ಇಷ್ಟೆ. www.pixtelevision.com  ಮೂಲಕ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಬೇಕು.

ನಿಮಗೊಂದು ಸದಸ್ಯತ್ವ ಸಂಖ್ಯೆಯನ್ನು ಇ-ಮೇಲ್ ಮೂಲಕ ಕಳುಹಿಸಲಾಗುವುದು. ಮಲ್ಟಿಫ್ಲೆಕ್ಸ್‌ನಲ್ಲಿ ಚಿತ್ರ ನೋಡಲು ತೆರಳುವಾಗ ಈ ಸಂಖ್ಯೆಯನ್ನು ನೀವು ಅಲ್ಲಿ ತೋರಿಸಬೇಕಾಗುತ್ತದೆ.

ಕೋರಮಂಗಲದ ಫೋರಂ ಮಾಲ್‌ನ ಪಿವಿಆರ್‌ನಲ್ಲಿ ಶುಕ್ರವಾರ  ಬೆಳಿಗ್ಗೆ 10ಕ್ಕೆ `ಪಿಕ್ಸ್ ಮೂವಿ ಕ್ಲಬ್~ನ ವಿದ್ಯಾರ್ಥಿ ಸದಸ್ಯರಿಗಾಗಿ `ತ್ರಿ ಮಸ್ಕೆಟಿಯರ್ಸ್~ ಚಿತ್ರದ ಉಚಿತ ಪ್ರದರ್ಶನ. ಪಾಲ್ ಡಬ್ಲು. ಎಸ್. ಆ್ಯಂಡರ್‌ಸನ್ ಈ ಚಿತ್ರ ನಿರ್ದೇಶಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಈ 3-ಡಿ ಚಲನಚಿತ್ರ ಕೆಲ ದಶಕದ ಹಿಂದೆ ತೆರೆಕಂಡಿದ್ದ `ತ್ರಿ ಮಸ್ಕೆಟಿಯರ್ಸ್~ ಕೃತಿಯ ಆಧುನಿಕ ರೂಪವಾಗಿದೆ. ಅದರ ಹಂದರವನ್ನು ಇಂದಿನ ಆಧುನಿಕ ಜೀವನ, ಜಗತ್ತಿಗೆ ಹೊಂದಿಸಿಕೊಂಡು ಚಿತ್ರಕಥೆ ರಚಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.