ADVERTISEMENT

ಪುಟಾಣಿಗಳಿಂದ ಯೋಧರಿಗೆ ನಮನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 12:20 IST
Last Updated 23 ಫೆಬ್ರುವರಿ 2011, 12:20 IST
ಪುಟಾಣಿಗಳಿಂದ ಯೋಧರಿಗೆ ನಮನ
ಪುಟಾಣಿಗಳಿಂದ ಯೋಧರಿಗೆ ನಮನ   

ಬೆಂಗಳೂರು ಮೂಲದ ಕಾರಾ ಫಾರ್ ಕಿಡ್ಸ್‌ನ ಇಂದಿರಾ ನಗರ, ಎಚ್‌ಎಸ್‌ಆರ್ ಲೇ ಔಟ್ ಮತ್ತು ಜಯಮಹಲ್ ಕೇಂದ್ರಗಳ 150ಕ್ಕೂ ಹೆಚ್ಚು ಮಕ್ಕಳು ವಾರ್ಷಿಕ ಕ್ರೀಡಾ ದಿನ ಆಚರಿಸಿದ್ದು ವೀರ ಯೋಧರಿಗೆ ನಮನ ಸಲ್ಲಿಸುವ ‘ಕರ್ತವ್ಯಂ ಕರೋತಿ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ.ಸೇನೆಯ ಹಾಲಿ ಮತ್ತು ನಿವೃತ್ತ ಯೋಧರು, ಅಗ್ನಿಶಾಮಕ, ತುರ್ತು ಸೇವೆ, ಕರಾವಳಿ ಪಡೆ ಮೊದಲಾದವುಗಳ ಯೋಧರಿಗೆ ಮಾರ್ಚ್‌ಫಾಸ್ಟ್, ದೇಶಭಕ್ತಿ ಗೀತೆಗಳ ಮೂಲಕ ವಂದಿಸಿದರು.

ನಾನಾ ಬಗೆಯ ಸಾಂಸ್ಕೃತಿಕ, ಶೌರ್ಯ, ಸಾಹಸ ಪ್ರದರ್ಶನ ನೀಡಿದರು. ಲಯಬದ್ಧವಾಗಿ ಬ್ಯಾಂಡ್‌ನಲ್ಲಿ ‘ಸಾರೆ ಜಹಾಂನ್ ಸೇ ಅಚ್ಛಾ’ ನುಡಿಸಿದರು. ‘ಮಾ ತುಜೇ ಸಲಾಂ, ವಂದೇ ಮಾತರಂ’ ಮೊದಲಾದ ಗೀತ ರೂಪಕ ಅಭಿನಯಿಸಿದರು. ಮಾಜಿ ಕ್ರಿಕೆಟಿಗ ಸೈಯದ್ ಕೀರ್ಮಾನಿ, ಕ್ರಿಕೆಟ್ ಆಡುವ ಮೂಲಕ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಿದರು.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.