ADVERTISEMENT

ಪುರಂದರ-ಕನಕ-ತ್ಯಾಗರಾಜರ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2013, 19:59 IST
Last Updated 12 ಫೆಬ್ರುವರಿ 2013, 19:59 IST
ಪುರಂದರ-ಕನಕ-ತ್ಯಾಗರಾಜರ ಆರಾಧನಾ ಮಹೋತ್ಸವ
ಪುರಂದರ-ಕನಕ-ತ್ಯಾಗರಾಜರ ಆರಾಧನಾ ಮಹೋತ್ಸವ   

ಶ್ರೀರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನವು ಗುರುವಾರದಿಂದ ಸೋಮವಾರದವರೆಗೆ (ಫೆ.14ರಿಂದ 18) ಪುರಂದರ-ಕನಕ-ತ್ಯಾಗರಾಜರ ಆರಾಧನಾ ಮಹೋತ್ಸವ ಆಯೋಜಿಸಿದೆ.

ಗುರುವಾರ ಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 6ಕ್ಕೆ ಗಣಹೋಮ, ಧನ್ವಂತರಿ ಹೋಮ, ರಾಮತಾರಕ ಹೋಮ ನಡೆಯಲಿದೆ. ಶುಕ್ರವಾರ ಸಂಜೆ 5.45ಕ್ಕೆ ದಾಸಾಮೃತ ಸಂಗೀತ ಕಾರ್ಯಕ್ರಮದಲ್ಲಿ ಆರ್.ಎ. ರಮಾಮಣಿ ಅವರಿಂದ ಗಾಯನ. ಎಸ್. ಶೇಷಗಿರಿ ರಾವ್ (ವಯಲಿನ್), ವಿ.ಎಸ್. ರಾಜಗೋಪಾಲ್ (ಮೃದಂಗ), ಎಸ್.ಎನ್. ನಾರಾಯಣಮೂರ್ತಿ (ಘಟಂ), ಎಂ. ಗುರುರಾಜ್ (ಮೋರ್ಚಿಂಗ್) ವಾದ್ಯ ಸಹಕಾರ ನೀಡಲಿದ್ದಾರೆ. ನಂತರ ಶ್ರೀ ವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದಂಗಳ ಅವರಿಂದ ವೇಣು ವಾದಕ ಶಂಕರರಾವ್, ನಿವೃತ್ತ ಪ್ರಾಂಶುಪಾಲ ಡಾ.ಹಯವದನ ಪುರಾಣಿಕ್, ಪ್ರಾಂಶುಪಾಲ ಡಾ.ಅಕ್ಕಿ ರಾಘವೇಂದ್ರಾಚಾರ್ಯ, ಡಾ.ಸಂಗೀತ ಅವರಿಗೆ `ವ್ಯಾಸ ಪ್ರಶಸ್ತಿ' ಪ್ರದಾನ ಮಾಡಲಿದ್ದಾರೆ.

ಅತಿಥಿಗಳು: ಆರ್.ಕೆ.ಶ್ರೀಕಂಠನ್, ಪದ್ಮನಾಭ, ಶ್ರೀ ಸುಯಮೀಂದ್ರ ಚಾರ್ಯ, ಗುರುರಾಜಾಚಾರ್ಯ, ಶಾಸಕ ವಿಜಯ್ ಕುಮಾರ್, ಶ್ರೀನಿವಾಸ್.

ಶನಿವಾರ ಕನಕದಾಸರ ಆರಾಧನಾ ಮಹೋತ್ಸವದಲ್ಲಿ ಸಂಜೆ 5.45ಕ್ಕೆ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳ ಅವರಿಂದ ಪ್ರವಚನ. ಮಂತ್ರಾಲಯ ಮಠದ ಅರ್ಚಕ ಯದುರಾಜಾಚಾರ್ಯ ಅವರಿಗೆ ಸನ್ಮಾನ. ಸಂಜೆ 7ಕ್ಕೆ ಕನಕ ನಮನ ಸಂಗೀತೋತ್ಸವದಲ್ಲಿ ಮೈಸೂರು ಎಂ.ನಾಗರಾಜ್, ಮೈಸೂರು ಎಂ.ಮಂಜುನಾಥ್ ಅವರಿಂದ ವಯಲಿನ್ ವಾದನ ಕಛೇರಿ. ಟಿ.ಎ.ಎಸ್.ಮಣಿ (ಮೃದಂಗ), ಟಿ.ಎನ್. ರಮೇಶ್ (ಘಟಂ), ಎಂ. ಗುರುರಾಜ್ (ಮೋರ್ಚಿಂಗ್).

ಸ್ಥಳ: ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್, ಜಯನಗರ. ಮಾಹಿತಿಗೆ: 98807 52574.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.