ADVERTISEMENT

ಪುರಾನವ ಗೆದ್ದ ನಾಗಸೇನಾ ಹುಡುಗರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಗ್ಲೋಬಲ್ ಆರ್ಗನೈಸೇಷನ್ ಫಾರ್ ಡಿವಿನಿಟಿ ಇಂಡಿಯಾ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಭಾರತೀಯ ವಿದ್ಯಾ ಭವನದಲ್ಲಿ ಅಂತರ್‌ಶಾಲಾ ರಸಪ್ರಶ್ನೆ ಕಾರ್ಯಕ್ರಮ `ಪುರಾನವ~ ಆಯೋಜಿಸಿತ್ತು.

ಭಾರತೀಯ ಪುರಾಣ ಮತ್ತು ಪರಂಪರೆ ಆಧಾರಿತ ಪ್ರರ್ಶನಾವಳಿಗಳ `ಪುರಾನವ 2011~ ಸ್ಪರ್ಧೆ ವಿಜೇತರಾಗಿ ಹೊರಹೊಮ್ಮಿದ ಸದಾಶಿವನಗರದ ನಾಗಸೇನಾ ವಿದ್ಯಾಲಯದ ಸಚಿನ್ ಹೆಬ್ಬಾರ್ ಮತ್ತು ಶಿಶಿರ್ ಅವರಿಗೆ ಸುವರ್ಣ ಟ್ರೋಫಿ ಮತ್ತು ಸುವರ್ಣ ಪದಕವನ್ನು ಬಹುಮಾನವಾಗಿ ನೀಡಲಾಯಿತು.

ದೇವಯ್ಯಪಾರ್ಕ್ ನಾಗಪ್ಪ ಬ್ಲಾಕ್‌ನ ಪವನ್ ಇಂಗ್ಲಿಷ್ ಸ್ಕೂಲ್ ರನ್ನರ್‌ಅಪ್ ಜೊತೆಗೆ ಬೆಳ್ಳಿ ಟ್ರೋಫಿ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡಿತು. ಫೈನಲ್‌ನಲ್ಲಿ ಭಾಗವಹಿಸಿದ್ದ ಇತರೆ ನಾಲ್ಕು ಶಾಲೆಗಳಿಗೆ ಕಂಚಿನ ಟ್ರೋಫಿ ಮತ್ತು ಕಂಚಿನ ಪದಕ ದೊರೆಯಿತು.

ವಲಯವಾರು ನಡೆದ ಸುತ್ತಿನಲ್ಲಿ 80 ಶಾಲೆಗಳು ಪಾಲ್ಗೊಂಡಿದ್ದವು. ಇದರಲ್ಲಿ 16 ಶಾಲೆಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದವು. ನಂತರ 6 ಶಾಲೆಗಳು ಫೈನಲ್‌ಗೆ ಪ್ರವೇಶ ಪಡೆದಿದ್ದವು. ರಾಮಾಯಣ, ಮಹಾಭಾರತ, ದೇವಸ್ಥಾನ, ಸಂತರು, ದಶಾವತಾರ ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಕುರಿತ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಲಾಯಿತು.

ಇನ್ಫೋಸಿಸ್ ಉಪಾಧ್ಯಕ್ಷ ಸಿ.ಎನ್. ರಘುಪತಿ ಅವರು ವಿಜೇತರಿಗೆ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಿದರು. ಗ್ಲೋಬಲ್ ಆರ್ಗನೈಸೇಷನ್ ಫಾರ್ ಡಿವಿನಿಟಿ ಸಂಸ್ಥೆ ಪುರಾತನ ವಿವೇಚನೆಯೊಂದಿಗೆ ಆಧುನಿಕ ಯುವಜನತೆಯ ನಡುವೆ ಸಂಪರ್ಕ  ಕಲ್ಪಿಸಲು `ಪುರಾನವ~ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.