`ಚೇಂಜ್ ದಿ ಗೇಮ್~ ಎಂದು ಫುಟ್‌ಬಾಲ್ ಪ್ರಚಾರಾಂದೋಲನದಲ್ಲಿ ತೊಡಗಿರುವ ಪೆಪ್ಸಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. `ಪೆಪ್ಸಿ ಟಿ-20 ಫುಟ್‌ಬಾಲ್~ ಎಂಬ ಫುಟ್‌ಬಾಲ್ ಲೀಗ್‌ಗೆ ಚಾಲನೆ ನೀಡಿದೆ.
7 ಮಂದಿಯ ತಂಡ, 20 ನಿಮಿಷದ ಅವಧಿ, 1- ಕೇಜ್,ಹೊಸ ನಿಯಮಗಳೊಂದಿಗೆ ಈ ಪೆಪ್ಸಿ ಟಿ-20 ಫುಟ್‌ಬಾಲ್ ಆಟ ಆರಂಭಗೊಳ್ಳಲಿದೆ.
ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರು, ಭಾರತೀಯ ಕ್ರಿಕೆಟಿಗರು, ಫುಟ್‌ಬಾಲ್ ಜಾಹೀರಾತಿನ ರಣ್‌ಬೀರ್ ಕಪೂರ್ ಎಲ್ಲರೂ ಪೆಪ್ಸಿ ಟಿ-20ಗೆ ಸಾಥ್ ನೀಡಲಿದ್ದಾರೆ.
ರಾಷ್ಟ್ರಾದ್ಯಂತ ನಡೆಯುವ ಈ ಟೂರ್ನಮೆಂಟ್‌ನಲ್ಲಿ ಗೆದ್ದವರಿಗೆ ಭಾರತೀಯ ಕ್ರಿಕೆಟಿಗರೊಂದಿಗೆ ಸೆಣಸುವ ಅವಕಾಶ ದೊರೆಯಲಿದೆ. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಫುಟ್‌ಬಾಲ್ ಕೋಚ್‌ಗಳಿಂದ ತರಬೇತಿ ಪಡೆಯುವ ಅವಕಾಶವೂ ಅವರದಾಗಲಿದೆ.
ಪೆಪ್ಸಿಕೊ ಇಂಡಿಯಾದ ಕೋಲಾಸ್, ಹೈಡ್ರೇಷನ್ ಅಂಡ್ ಮ್ಯೋಂಗೊ ಬೇಸ್ಡ್ ಬೆವರೇಜಸ್ ಘಟಕದ ನಿರ್ದೇಶಕ ಹೋಮಿ ಬಟ್ಟಿವಾಲಾ ಮಾತನಾಡಿ, `ಪೆಪ್ಸಿ ಟಿ-20 ಫುಟ್‌ಬಾಲ್~ ಪಂದ್ಯಕ್ಕೆ ಹೊಸತನ ನೀಡಲಿದೆ. ಈ ಪಂದ್ಯದಿಂದ ಫುಟ್‌ಬಾಲ್ ಭವಿಷ್ಯಕ್ಕೆ ವಿನೂತನ ತಿರುವು ಸಿಗಲಿದೆ.
ಭಾರತದಲ್ಲಿ ಫುಟ್‌ಬಾಲ್ ಪ್ರಚಾರಕ್ಕೆ ಹಿಂದೆಂದೂ ಕೈಗೊಳ್ಳದ ಪ್ರಯತ್ನವನ್ನು ಮಾಡಿದ್ದೇವೆ. ಭಾರತೀಯ ಕ್ರಿಕೆಟ್ ಪಟು, ಬಾಲಿವುಡ್ ತಾರೆಯರು ಮತ್ತು ಅಂತರರಾಷ್ಟ್ರೀಯ ಫುಟ್‌ಬಾಲ್ ತಾರೆಯರು ಭಾಗವಹಿಸುವುದರಿಂದ ಫುಟ್‌ಬಾಲ್ ಪ್ರಿಯರಿಗೆ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಫುಟ್‌ಬಾಲ್ ಮಾತು ಅನುರಣಿಸಲಿದೆ ಎಂದರು.
`ನಾನೂ ಫುಟ್‌ಬಾಲ್ ಪ್ರೇಮಿ. ಈ ಕ್ರೀಡೆಯನ್ನು ದೇಶದ ಯುವಜನತೆಯಲ್ಲಿ ಜನಪ್ರಿಯಗೊಳಿಸುವ ಪೆಪ್ಸಿಯ ಪ್ರಯತ್ನ ದಿಂದ ಸಂತೋಷವಾಗಿದೆ. ಇದರೊಂದಿಗೆ ಭಾಗಿಯಾಗಲು ಹೆಮ್ಮೆಯೆನಿಸುತ್ತಿದೆ.
ಮತ್ತು ಯಂಗಿಸ್ತಾನ್ ಹೊಸ ಪೆಪ್ಸಿ ಟಿ-20 ಫುಟ್‌ಬಾಲ್ ಮಾದರಿಯನ್ನು ಎಲ್ಲರೂ ಆನಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಂತಸ ಹಂಚಿಕೊಂಡರು ರಣ್‌ಬೀರ್ ಕಪೂರ್, `ಪೆಪ್ಸಿ ಟಿ-20 ಫುಟ್‌ಬಾಲ್~ ನಲ್ಲಿ ಆಸಕ್ತಿಯುಳ್ಳ 14ರಿಂದ 30 ವಯೋಮಿತಿಯ ಹವ್ಯಾಸಿ ಫುಟ್‌ಬಾಲ್ ಪಟುಗಳು ನಿಗದಿಪಡಿಸಿದ ಸ್ಥಳಗಳಲ್ಲಿ 7 ಸದಸ್ಯರ ತಂಡದೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.
ಬೆಂಗಳೂರು, ಚೆನ್ನೈ, ಕೊಲ್ಕತಾ, ಮುಂಬೈ, ಲಖನೌ, ಲೂಧಿಯಾನ ಮತ್ತು ದೆಹಲಿಯಲ್ಲಿ ನೋಂದಣಿ ಮತ್ತು ಪಂದ್ಯ ನಡೆಸಲಾಗುತ್ತದೆ.
ಚೆನ್ನೈನಲ್ಲಿ ಮಾರ್ಚ್ 14ರಂದು ನೋಂದಣಿ ಪ್ರಾರಂಭವಾಗಿ ಟೂರ್ನಮೆಂಟ್ ಜೂನ್ ತಿಂಗಳವರೆಗೆ ನಡೆಯುತ್ತದೆ. ಪ್ರತಿ ನಗರದ 64 ತಂಡಗಳು ನಾಕೌಟ್ ಶೈಲಿಯ 20 ನಿಮಿಷದ ಪಂದ್ಯಗಳಲ್ಲಿ ಸ್ಪರ್ಧಿಸುತ್ತವೆ. ಶ್ರೇಷ್ಠ 32 ತಂಡಗಳು ಆಯಾ ನಗರದ ಫೈನಲ್ಸ್‌ನಲ್ಲಿ ಭಾಗವಹಿಸುತ್ತವೆ.
ಸಿಟಿ ಫೈನಲ್ ಅನ್ನು ವಿಶಿಷ್ಟ ಮೆಟಾಲಿಕ್ ಕೇಜ್‌ನಲ್ಲಿ ಸಂಗೀತ, ವಿನೋದ ಮತ್ತು ಪೆಪ್ಸಿಯೊಂದಿಗೆ ಆಯೋಜಿಸಲಾಗುತ್ತದೆ. ಪ್ರತಿ ನಗರದಿಂದ ಒಂದು ವಿಜೇತ ತಂಡ ಸೇರಿ ಒಟ್ಟು 8 ತಂಡಗಳು ಮತ್ತು ವೈಲ್ಡ್ ಕಾರ್ಡ್ ಎಂಟ್ರಿ ತಂಡ `ಗೇಮ್ ಚೇಂಜರ್ಸ್ ಆಗಲು ಸ್ಪರ್ಧಿಸುತ್ತಾರೆ.
ಪೆಪ್ಸಿ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ವಿಶೇಷ 8 ಎಪಿಸೋಡ್ ಸರಣಿಯನ್ನು ಏಪ್ರಿಲ್ 2012ರಿಂದ ಪ್ರಾರಂಭಿಸಲು ಪೆಪ್ಸಿ ಕಂಪನಿ ಪಾಲುದಾರಿಕೆ ಹೊಂದಿದೆ.
ಪೆಪ್ಸಿ ಟಿ-20 ಫುಟ್‌ಬಾಲ್ ಕುರಿತು ಹೆಚ್ಚಿನ ವಿವರಗಳಿಗೆ
www.facebook.com/pepsiindia or www.pepsichangethegame.com ಗೆ ಲಾಗಿನ್ ಆಗಬಹುದು ಅಥವಾ 08888866666 ಕರೆ ಮಾಡಬಹುದು.
ಬೆಂಗಳೂರಿನಲ್ಲಿ: ಬೆಂಗಳೂರಿನಲ್ಲಿ ಮಾರ್ಚ್ 21ರಿಂದ 27ರವರೆಗೂ ನೋಂದಣಿ ನಡೆಯುತ್ತದೆ. ಪಂದ್ಯ 31ನೇ ಮಾರ್ಚ್‌ನಿಂದ 1ನೇ ಏಪ್ರಿಲ್‌ವರೆಗೂ ನಡೆಯುತ್ತದೆ. ಇದರ ಸಿಟಿಫಿನಾಲೆ ಏಪ್ರಿಲ್ 7 ಮತ್ತು 8ಕ್ಕೆ ನಡೆಯುತ್ತದೆ. ಗ್ರಾಂಡ್ ಫಿನಾಲೆ ಜ್ಯೂನ್‌ನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.