ADVERTISEMENT

ಪ್ರೊಲೈನ್ ಫಿಟ್‌ನೆಸ್ ಆಂದೋಲನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 19:30 IST
Last Updated 8 ಏಪ್ರಿಲ್ 2011, 19:30 IST
ಪ್ರೊಲೈನ್ ಫಿಟ್‌ನೆಸ್ ಆಂದೋಲನ
ಪ್ರೊಲೈನ್ ಫಿಟ್‌ನೆಸ್ ಆಂದೋಲನ   

ದೇಹದಾರ್ಢ್ಯ, ಫಿಟ್‌ನೆಸ್ ಸಲಕರಣೆಗಳ ತಯಾರಿಕಾ ಕಂಪೆನಿ ಪ್ರೊಲೈನ್ ಫಿಟ್‌ನೆಸ್ ಈಗ ‘ಫಿಟ್‌ನೆಸ್ ಇಂಡಿಯಾ ಮೂವ್‌ಮೆಂಟ್’ ಎಂಬ ವಿಶಿಷ್ಟ ಬಗೆಯ ಆಂದೋಲನ ಆರಂಭಿಸಿದೆ. ಆರೋಗ್ಯವಂತ ಮತ್ತು ದೃಢಕಾಯ ಜನರ ದೇಶವಾಗಿ ಭಾರತವನ್ನು ಪರಿವರ್ತಿಸುವ ನಿಟ್ಟಿನಲ್ಲಿ ‘ಪ್ರೊಲೈನ್ ಮೂವ್‌ಮೆಂಟ್’ ಕಾರ್ಯ ನಿರ್ವಹಿಸಲಿದೆ.

ಫಿಟ್‌ನೆಸ್‌ಗೆ ಅಗತ್ಯ ಇರುವ ಆಹಾರ ನಿಯಂತ್ರಣ ಪದ್ಧತಿ (ಡಯಟಿಂಗ್), ಫಿಟ್‌ನೆಸ್ ಸಾಧನ ಸಲಕರಣೆಗಳು, ಯೋಗ, ವರ್ಕ್‌ಔಟ್ ರೆಜಿಂ, ತಜ್ಞರ ಸಲಹೆ ಸೂಚನೆಗಳು ಇತ್ಯಾದಿ ಮಾಹಿತಿಯನ್ನು ಈ ಮೂಲಕ ಪಡೆಯಬಹುದಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಬಳಕೆದಾರರು www.prolinesfitness.inವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬೇಕು.

ಇದರಲ್ಲಿ ಫಿಟ್‌ನೆಸ್ ಕ್ಷೇತ್ರದ ಹೊಸ ಹೊಸ ಬೆಳವಣಿಗೆಗಳು, ಸಂಶೋಧನೆಗಳು, ಆವಿಷ್ಕಾರಗಳು, ತಂತ್ರಜ್ಞಾನ, ಉಪಕರಣಗಳು ಇತ್ಯಾದಿಗಳ ವಿವರಣೆ ನೀಡಲಾಗುವುದು. ಪ್ರತಿ ವಾರ ಆಹಾರ ಕ್ರಮ, ದೈಹಿಕ ವ್ಯಾಯಾಮ ಕ್ರಮಗಳು, ಸಲಹೆಗಳು, ಅನುಭವಿಗಳ ಕಿವಿಮಾತುಗಳನ್ನು ಅಳವಡಿಸಲಾಗುವುದು.

ಸಂಗೀತದ ಮೂಲಕ ಮನುಷ್ಯನ ದೇಹ, ಮನಸ್ಸಿನ ಆರೋಗ್ಯ ಹೆಚ್ಚಿಸುವ ಕ್ರಮದ ಬಗ್ಗೆಯೂ ಈ ವೆಬ್‌ಸೈಟ್ ಬೆಳಕು ಚೆಲ್ಲಲಿದೆ. ’ಮ್ಯೂಸಿಕ್ ಟು ಮೂವ್‌ಮೆಂಟ್’ನಲ್ಲಿ (ಸಂಗೀತ ವ್ಯಾಯಾಮ) ವ್ಯಾಯಾಮದ ಮಾಹಿತಿ ನೀಡಲಾಗುವುದು. ಅನುಭವಿ ಫಿಟ್‌ನೆಸ್ ತಜ್ಞರನ್ನು ‘ಫಿಟ್‌ನೆಸ್ ಗವರ್ನರ್ ಅಫ್ ದಿ ಮಂಥ್’ ಎಂದು ಗುರುತಿಸಿ ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇವರ ಬಳಿ ನಿಮ್ಮ ಸಂದೇಹಗಳಿಗೆ ಉತ್ತರ ಪಡೆಯಬಹುದಾಗಿದೆ.                       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.