ಅಕ್ಷಯಪಾತ್ರೆ ಫೌಂಡೇಷನ್‌ನ ಬಿಸಿಯೂಟದ ಯೋಜನೆಗೆ `ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪ್' ಕೈಜೋಡಿಸಿದೆ. ವಸಂತಪುರದ ಅಕ್ಷಯಪಾತ್ರೆಯ ಅಡುಗೆಮನೆಗೆ ಸುಮಾರು ರೂ 15 ಲಕ್ಷ ವೆಚ್ಚದಲ್ಲಿ ಫಿಲಿಪ್ಸ್ ಕಂಪನಿ ಬಯೋಗ್ಯಾಸ್ ಯೂನಿಟ್‌ನ್ನು ನಿರ್ಮಿಸಿಕೊಟ್ಟಿದೆ. ಪರಿಸರ ದಿನದ ಸಂದರ್ಭದಲ್ಲಿ ಬಯೋಗ್ಯಾಸ್ ಯೂನಿಟ್‌ಗೆ ಫಿಲಿಪ್ಸ್ ಲೈಟಿಂಗ್ ನಿರ್ದೇಶಕ ನಟರಾಜ್ ಕುಮಾರ್ ಎಸ್. ಚಾಲನೆ ನೀಡಿದ್ದಾರೆ.
`ಈ ಯೂನಿಟ್ ದಿನಕ್ಕೆ 50 ಕೇಜಿಯಷ್ಟು ಇಂಧನವನ್ನು ಉಳಿಸಲಿದೆ. ತಿಂಗಳಿಗೆ 70 ಎಲ್‌ಪಿಜಿ ಸಿಲಿಂಡರ್‌ನ ಅಗತ್ಯವನ್ನು ಬಯೋಗ್ಯಾಸ್ ನೀಗಿಸಲಿದೆ. ಇದರಿಂದ ಅಕ್ಷಯಪಾತ್ರೆ ಯೋಜನೆಗೆ ವಾರ್ಷಿಕ ರೂ15 ಲಕ್ಷ ಹಣ ಉಳಿತಾಯವಾಗಲಿದೆ.
ಪ್ರತಿದಿನ 1.2 ಲಕ್ಷ ಮಕ್ಕಳು ಅಕ್ಷಯಪಾತ್ರೆಯ ಮೂಲಕ ಹಸಿವು ನೀಗಿಸಿಕೊಳ್ಳುತ್ತಿದ್ದು ಈ ಯೋಜನೆಗೆ ಸಹಾಯ ಮಾಡುತ್ತಿರುವುದು ಸಂತೋಷ ತಂದಿದೆ. ಇದಲ್ಲದೆ ಫಿಲಿಪ್ಸ್ ಕಂಪನಿ ಶಿಕ್ಷಣ, ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ'.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.