ಹೋಳಿ ಸಡಗರ ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮಾಡಿತ್ತು. ವಯಸ್ಸಿನ ಅಂತರವಿಲ್ಲದೇ ತರಹೇವಾರಿ ಬಣ್ಣಗಳನ್ನು ಬಳಿದು ಸಂಭ್ರಮಿಸಿದರು. ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಆಯೋಜಿಸಿದ್ದ ಹೋಳಿ ಹಬ್ಬದಲ್ಲಿ, ಉತ್ತರ ಕರ್ನಾಟಕದ ಮಂದಿ ಜನಪದ ಗೀತೆ, ಹಲಗೆ ಹೊಡೆದು, ಕಾಮನ ಸುಟ್ಟು ಹೋಳಿಯ ಸಂಭ್ರಮದಲ್ಲಿ ಮಿಂದೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.