ADVERTISEMENT

ಬಳೆಗಳ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಅತ್ಯುತ್ತಮ ಪಾರಂಪರಿಕ ಮತ್ತು ಆಕರ್ಷಕ ವಿನ್ಯಾಸದ ಆಭರಣ ಮಳಿಗೆ ಎಂದು ಗುರುತಿಸಿಕೊಂಡಿದೆ. ಬ್ರಿಟಿಷರು ಹಾಗೂ ರಾಜಮನೆತನಗಳಿಗೆ ಆಭರಣ ವಿನ್ಯಾಸ ಮಾಡಿಕೊಟ್ಟ ಹೆಗ್ಗಳಿಕೆ ಇದರದ್ದು.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಮಾ. 25ರವರೆಗೆ ಮಣಿಕಟ್ಟಿನ ಅಲಂಕಾರ ಬಿಂಬಿಸುವ ಬ್ಯಾಂಗಲ್ಸ್ ಫೆಸ್ಟಿವಲ್ ಆಚರಿಸುತ್ತಿದೆ.

ಬ್ಯಾಂಗಲ್ಸ್ ಫೆಸ್ಟಿವಲ್ ಎಲ್ಲ ಮಹಿಳೆಯರಿಗೆ ಸಲ್ಲಿಸುವ ಗೌರವ. ಉತ್ಸವದಲ್ಲಿ 4,000ಕ್ಕೂ ಹೆಚ್ಚು ಬಗೆಯ ಬಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಹಿಳೆಯರ ಮನಕ್ಕೆ ಒಪ್ಪುವ ದೊಡ್ಡ ಸಂಗ್ರಹ ಇಲ್ಲಿದೆ. ಹಾಗಾಗಿ ಆಯ್ಕೆ ಎಂಬುದು ಇಲ್ಲಿ ಅಚ್ಚರಿ. ಉತ್ಸವದಲ್ಲಿ ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ಹಾಗೂ ನಾನಾ ಬಗೆಯ ಹವಳಗಳ ಬಳೆ ಮತ್ತು ಮಣಿಕಟ್ಟಿನ ಉಡುಗೆಗಳನ್ನು ಒಳಗೊಂಡಿದೆ.

ಕಸೂತಿ ಮಾಡಿದ ಹಾಲ್ಮಾರ್ಕ್ ಚಿಹ್ನೆ ಹೊಂದಿರುವ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್‌ನ 14 ಸಂಗ್ರಹಗಳು ಇಲ್ಲಿನ ವಿಶೇಷ. ಫಿಲಿಗ್ರಿ, ಜೋಡಿ ಕಡ, ಸಿಂಹ ಕಡ, ಕೂರ್ಗ್ ಕಡ, ಕುಂದನ್ ಬಳೆಗಳು, ನವರತ್ನ ಬಳೆಗಳು, ಗ್ಲೌಸು ಬಳೆ, ಕನಸು ಬಳೆ, ಕೈಯಿಂದ ಮಾಡಿದ ಸಾಂಪ್ರದಾಯಿಕ ಬಳೆ, ಕೇಶಿ ಹವಳದ ಬಳೆ, ವಳಂದ ಬಳೆ, ಪಟ್ಟನಿ ಶೈಲಿಯ ಬಳೆ ಮೊದಲಾದವು ಇಲ್ಲಿನ ವಿಶೇಷ ಆಕರ್ಷಣೆಗಳು.

ಹೋಳಿಯ ಸಂಭ್ರಮದ ಹೊತ್ತಿನಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಬಳೆಗಳ ಉತ್ಸವದ ಮೂಲಕ ಬಣ್ಣದ ಬಳೆಗಳನ್ನು ನೀಡುತ್ತಿದೆ. ಈ ಅಲಂಕಾರಿಕ ಬಳೆಗಳು ಮಹಿಳೆಯರ ಅಂದವನ್ನು ಇನ್ನಷ್ಟು ಹೆಚ್ಚಿಸಲಿವೆ.

`ಬಳೆಗಳು ದೇಶದ ನಾನಾ ಸಂಸ್ಕೃತಿ ಮತ್ತು ಜನತೆಯ ಬಿಂಬ. ಬಳೆಗಳ ವೃತ್ತಾಕಾರದ ರೂಪ ಸೂರ್ಯನ ಶಕ್ತಿ ಸೂಚಕ ಎಂಬ ನಂಬಿಕೆಯಿದೆ. ಈ ಬಳೆಗಳ ಉತ್ಸವದಲ್ಲಿ ನಾನಾ ಬಣ್ಣದ, ಶೈಲಿಯ, ಕಸೂತಿ ಬಳೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ~ ಎನ್ನುತ್ತಾರೆ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಹಯಗ್ರೀವ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.