ADVERTISEMENT

ಬಾಂಧವ್ಯ ಬೆಸುಗೆಗೆ ಒರಿಯೊ ಬಸ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 19:30 IST
Last Updated 22 ಜೂನ್ 2011, 19:30 IST
ಬಾಂಧವ್ಯ ಬೆಸುಗೆಗೆ ಒರಿಯೊ ಬಸ್
ಬಾಂಧವ್ಯ ಬೆಸುಗೆಗೆ ಒರಿಯೊ ಬಸ್   

ಒಂದು ಕೈಯಲ್ಲಿ ಲ್ಯಾಪ್‌ಟಾಪ್, ಮತ್ತೊಂದು ಕೈಯಲ್ಲಿ ಕಾರ್ ಕೀ. ಮನೆಗೆ ಬಂದಾಗ 7 ಗಂಟೆ. ಕಾಫಿ ಗುಟಕರಿಸುತ್ತ ನಾಳೆಯ ಪ್ರೆಸೆಂಟೇಷನ್‌ಗಾಗಿ ಬಿಡುವಿಲ್ಲದ ತಯಾರಿ. ಈ ಮಧ್ಯೆ ಕ್ರಿಕೆಟ್ ಆಸೆಗಾಗಿ ಟಿವಿ ಪರದೆಯ ಮೇಲೆ ಕಣ್ಣು.

ಪಪ್ಪಾ... ಚೆಸ್ ಆಡೋಣ್ವಾ? ಅದಕ್ಕೆ ಅಪ್ಪನ ಉತ್ತರ `ಪಪ್ಪಾ ಈಸ್ ಬ್ಯುಸಿ ಪುಟ್ಟಾ. ವಿಲ್ ಸ್ಪೆಂಡ್ ಟೈಮ್ ಆನ್ ಸಂಡೆ, ಓ.ಕೆ.~

`ಮಮ್ಮಾ ಮುಂದಿನ ವಾರ ಸ್ಕೂಲ್‌ನಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ. ನಾನೇನ್ ಮಾಡ್ಲಿ..?~. ಅಮ್ಮನ ಬಾಯಿಂದ `ವೀಕೆಂಡ್‌ನಲ್ಲಿ ಪ್ಲಾನ್ ಮಾಡೋಣ ಕಂದಾ...~
ರಾತ್ರಿ, ಏಳು, ಎಂಟು ಗಂಟೆಯ ಹೊತ್ತಿಗೆ ಉದ್ಯೋಗಸ್ಥ ದಂಪತಿ ಮನೆಯಲ್ಲಿ ಕೇಳಿಬರುವ ಸ್ಟ್ಯಾಂಡರ್ಡ್ ಸಂಭಾಷಣೆ ಇದು.

ಕಚೇರಿಯಲ್ಲಿ ಟಾರ್ಗೆಟ್ ಮುಟ್ಟುವ ಗುರಿ. ದಾರಿಯಲ್ಲಿ ಟ್ರಾಫಿಕ್ ಜಂಜಾಟ. ಮನೆ ಮುಟ್ಟುವ ಹೊತ್ತಿಗೆ ದಣಿದು ಬಸವಳಿಯುವ ಜೀವ. ಮಕ್ಕಳನ್ನು ಮನಸ್ಸು ತುಂಬಾ ಮುದ್ದಾಡಲು ಸಮಯವಿಲ್ಲ.
 
ಇದು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ. ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ಎಲ್ಲ ದೊಡ್ಡ ನಗರಗಳಲ್ಲೂ ಉದ್ಯೋಗಸ್ಥ ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವಂತೆ.

ಪಾಲಕರು ಮಕ್ಕಳ ಜೊತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಕ್ಯಾಡ್‌ಬರಿ ಇಂಡಿಯಾ `ಒರಿಯೊ ಟುಗೆದರ್‌ನೆಸ್~ ಎಂಬ ದೇಶವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಿದೆ.
 
ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ `ಒರಿಯೊ~ ಬ್ರಾಂಡ್ ಚಾಕೊಲೇಟ್ ಹೆಸರಿನಲ್ಲಿ ಈ ಅಭಿಯಾನ. ಇದಕ್ಕೂ ಮುನ್ನ ಕ್ಯಾಡ್‌ಬರಿ ಇದೇ ವಿಚಾರದ ಕುರಿತು ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಿತ್ತು.

ಜೂನ್ 23ರಿಂದ 25ರ ವರೆಗೆ ಬೆಂಗಳೂರಿನ ವಿವಿಧ ಮಾಲ್‌ಗಳಲ್ಲಿ `ಒರಿಯೊ ಟುಗೆದರ್‌ನೆಸ್~ ಬಸ್ ಸಂಚರಿಸಲಿದೆ.  ಗುರುವಾರ ಟೋಟಲ್ ಮಾಲ್, ಶುಕ್ರವಾರ ಗರುಡಾ ಮಾಲ್ ಮತ್ತು ಶನಿವಾರ ವೈಟ್‌ಫೀಲ್ಡ್ ರಸ್ತೆಯ ಫೋರಂ ವ್ಯಾಲ್ಯೂ ಮಾಲ್ ಮುಂದೆ ಈ ಬಸ್ ನಿಲ್ಲಲಿದೆ.

ಇದರಲ್ಲಿ ಮಕ್ಕಳು ಮತ್ತು ಪಾಲಕರು ಜೊತೆಗೂಡಿ ಮಾಡುವ ಹಲವು ಆಕರ್ಷಕ ಚಟುವಟಿಕೆಗಳು, ಆಟಗಳು ಇರುತ್ತವೆ. ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದಾಗಿ ಪಾಲಕರು ಅಲ್ಲಿ ಪ್ರತಿಜ್ಞೆ ಮಾಡಬೇಕಾಗುತ್ತದೆ. ನಿಮ್ಮ ಕಂದಮ್ಮಗಳೊಂದಿಗೆ ಅಲ್ಲಿಗೆ ಹೋಗುವಿರಲ್ಲ ಮತ್ತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.