ಮಹಿಳಾ ಆರೋಗ್ಯ ಮತ್ತು ಫಿಟ್‌ನೆಸ್ ಕೇಂದ್ರ ಕಾಂಟೋರ್ಸ್ ಇಂಟರ್‌ನ್ಯಾಷನಲ್, ಭಾನುವಾರ ಬೆಳಿಗ್ಗೆ 8ರಿಂದ ದೇವನಹಳ್ಳಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಕ್ಲಾರ್ಕ್ಸ್ ಎಗ್ಸೋಟಿಕಾ ರೆಸಾರ್ಟ್ ಆವರಣದಲ್ಲಿ ಮಹಿಳಾ ಶಿಕ್ಷಣ, ಆರೋಗ್ಯ ಕುರಿತು ಜನ ಜಾಗೃತಿ ಓಟವನ್ನು ಆಯೋಜಿಸಿದೆ. ಭಾರತೀಯ ಮಹಿಳೆಯ ಸಬಲೀಕರಣಕ್ಕಾಗಿ ಎಲ್ಲ ವಯೋಮಾನದ ಮಹಿಳೆ ಮತ್ತು ಪುರುಷರಿಗಾಗಿ ಓಟ ಏರ್ಪಾಡಾಗಿದೆ.
ಸ್ತ್ರೀತನವನ್ನು ಸಂಭ್ರಮಿಸಲು ಹೆಣ್ಣುಮಗುವಿನ ಭವಿಷ್ಯಕ್ಕಾಗಿ ಓಡಬಹುದು, ನಡೆಯಬಹುದು. ನೋಂದಾವಣೆ ಪ್ರಕ್ರಿಯೆಯ ಮೂಲಕ ಸಂಗ್ರಹವಾದ ಮೊತ್ತದ ಒಂದು ಭಾಗ ಬಾಲಕಿಯರ ಶಿಕ್ಷಣದಲ್ಲಿ ತೊಡಗಿಸಿಕೊಂಡ ‘ಪರಿಕ್ರಮ ಫೌಂಡೇಶನ್’ ಮತ್ತು ‘ಆಶಾ’ಗೆ ಸೇರಲಿದೆ. ರನ್ನರ್ಸ್ ಫಾರ್ ಲೈಫ್, ರಿಲಯನ್ಸ್ ಟ್ರೆಂಡ್ಸ್‌ಗಳು ಕೂಡ ಈ ಓಟದಲ್ಲಿ ಕೈಜೋಡಿಸಿವೆ. ಮಾಹಿತಿಗೆ: www.contoursinternational.com/ ಅಥವಾ ರಿಲಯನ್ಸ್ ಟ್ರೆಂಡ್ಸ್ ಮಳಿಗೆಗಳು.
ಕ್ಯಾಡ್ ಸೆಂಟರ್‌ನಿಂದ ಸ್ಕಾಲರ್‌ಶಿಪ್ ಪರೀಕ್ಷೆ
ಕಂಪ್ಯೂಟರ್ ನೆರವಿನ ಡಿಸೈನಿಂಗ್ ಮತ್ತು ಪ್ರಾಜೆಕ್ಟ್ ಪ್ಲಾನಿಂಗ್ ಮ್ಯಾನೇಜ್‌ಮೆಂಟ್ ಶಿಕ್ಷಣದಲ್ಲಿ ಏಷ್ಯದ ಪ್ರಮುಖ ತರಬೇತಿ ಸಂಸ್ಥೆಗಳಲ್ಲೊಂದಾದ ‘ಕ್ಯಾಡ್ ಸೆಂಟರ್’ ಶನಿವಾರ ಮತ್ತು ಭಾನುವಾರ (ಮಾರ್ಚ್ 12,13) ವಾರ್ಷಿಕ ವಿದ್ಯಾರ್ಥಿ ವೇತನ ಅರ್ಹತಾ ಪರೀಕ್ಷೆ ನಡೆಸಲಿದೆ.
ಇದರಲ್ಲಿ ತೇರ್ಗಡೆಯಾದವರಿಗೆ ಕ್ಯಾಡ್ ಸೆಂಟರ್‌ನ ನಾನಾ ಕೋರ್ಸ್‌ಗಳಲ್ಲಿ ಶೇ 50ರ ವರೆಗೂ ವಿದ್ಯಾರ್ಥಿ ವೇತನ ನೀಡಲಾಗುವುದು.
ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್, ಮ್ಯಾನೇಜ್‌ಮೆಂಟ್ ಕೋರ್ಸ್‌ನ ವಿದ್ಯಾರ್ಥಿಗಳು ಈ ಮೂಲಕ 5 ಸಾವಿರ ರೂದಿಂದ 75 ಸಾವಿರ ರೂ ತನಕ ವಿದ್ಯಾರ್ಥಿ ವೇತನ ಪಡೆಯಬಹುದು.ಪದವೀಧರರು, ವೃತ್ತಿಪರರು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರು. ಪ್ರವೇಶ ಪತ್ರ ಮತ್ತು ಮಾಹಿತಿಗೆ: 2657 0370.
ಕರಕುಶಲ ಶಿಬಿರ
ಜೀವನಹಳ್ಳಿಯ ದೇವಕಿ ಕಲಾ ಕುಟೀರ ಪ್ರತಿ ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ಕಾಕ್ಸ್‌ಟೌನ್‌ನ ವಿಜಯ ಭಾರತಿ ಪಿಯು ಕಾಲೇಜಿನಲ್ಲಿ ಕರಕುಶಲ ವಸ್ತು ತಯಾರಿಕೆ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಅಂಗವಿಕಲರಿಗೆ ಉಚಿತ ಪ್ರವೇಶ. ಮಾಹಿತಿಗೆ: ದೇವಕಿಸುತ 98861 91206.
ನರ್ಸರಿ ಶಿಕ್ಷಣ: ಸಮ್ಮೇಳನ
ಎನ್‌ಜಡ್‌ಟಿಸಿ (ನ್ಯೂಜಿಲೆಂಡ್ ಟೆರಿಟರಿ ಕೌನ್ಸಿಲ್) ಇಂಡಿಯಾ ಸಹಯೋಗದಲ್ಲಿ ಪೋದಾರ್ ಶಿಕ್ಷಣ ಸಂಸ್ಥೆ ಮತ್ತು ಶನಿವಾರ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರ ಹೊಸ ಪಾತ್ರ’ ವಿಷಯದ ಕುರಿತು ಸಮ್ಮೇಳನ ಏರ್ಪಡಿಸಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ‘ಬಾಲ್ಯ ಪೂರ್ವದ ಶಾಲೆಗಳ ಸಂಘ’ದ (ಇಸಿಎ) ಉದ್ಘಾಟನೆಯೂ ನಡೆಯಲಿದೆ. ಮಕ್ಕಳ ಮನಶಾಸ್ತ್ರಜ್ಞ ಡಾ. ಹರೀಶ್ ಶೆಟ್ಟಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಸ್ಥಳ: ಹೋಟೆಲ್ ಏಟ್ರಿಯಾ, ಅರಮನೆ ರಸ್ತೆ.
ಬೆಳಿಗ್ಗೆ 9.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.