ಪ್ರಭುದೇವ ಅವರ ಮುಂದಿನ ಚಿತ್ರಕ್ಕೆ ಶ್ರುತಿ ಹಾಸನ್ ಆಯ್ಕೆಯಾಗಿದ್ದು ಹಳೆಯ ಸುದ್ದಿ. ಇದೀಗ ಸೆಟ್‌ನಲ್ಲಿ ಪ್ರಭು ಹಾಗೂ ಶ್ರುತಿ ತಮಿಳುನಲ್ಲಿ ಹರಟೆ ಹೊಡೆಯುತ್ತಿರುವುದು ಹೊಸ ಸುದ್ದಿಯಾಗಿದೆ.
`ಬಾಲ್ಯದಿಂದಲೂ ನಾನು ಪ್ರಭುದೇವ ಅವರ ಅಭಿಮಾನಿಯಾಗಿದ್ದೆ. ಕನಸಿನಲ್ಲೂ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಗಬಲ್ಲುದು ಎಂದುಕೊಂಡಿರಲಿಲ್ಲ.
ಬಾಲಿವುಡ್‌ನಲ್ಲಿ ಕೆಲಸ ಮಾಡುವುದು ಎಂದರೆ ಒಂದಿನಿತು ಚಿಂತೆಯಾಗಿತ್ತು. ಆದರೆ ಇದೀಗ ಎಲ್ಲವೂ ಸರಳವಾಗಿದೆ. ಪ್ರಭು ಸರ್ ತಮಿಳಿನಲ್ಲಿಯೇ ಮಾತನಾಡುತ್ತಾರೆ. ನಾವು ನಗುತ್ತೇವೆ. ಮನೆಯಿಂದ ದೂರವಿದ್ದೇನೆ ಎಂದೆನಿಸುವುದೇ ಇಲ್ಲ~ ಎಂದು ಶ್ರುತಿ ಹೇಳಿದ್ದಾರೆ.
ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಯಾರಿಗೂ ಅರ್ಥವಾಗದಿದ್ದರೂ ಪ್ರಭು ಹಾಗೂ ಶ್ರುತಿ ತಮಿಳಿನಲ್ಲಿ ಸಂವಾದಿಸುತ್ತಾರೆ ಎಂಬುದು ಬಾಲಿವುಡ್ ಸ್ಟುಡಿಯೋಗಳಲ್ಲಿ ಕೇಳಿ ಬರುವ ಮಾತಾಗಿದೆ.
್ಢ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.