ADVERTISEMENT

ಬಿಂದ್ರಾ ಬದುಕು ತೆರೆಗೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST
ಬಿಂದ್ರಾ ಬದುಕು ತೆರೆಗೆ
ಬಿಂದ್ರಾ ಬದುಕು ತೆರೆಗೆ   

ಅಭಿನವ್‌ ಬಿಂದ್ರಾ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಶೂಟರ್‌. ಇದೀಗ ಅವರ ಆತ್ಮಕಥೆಯೂ ಚಲನಚಿತ್ರವಾಗುತ್ತಿದೆ.

ಕ್ರಿಕೆಟ್‌ನ ಮಹೇಂದ್ರಸಿಂಗ್‌ ಧೋನಿ, ಅಜರ್‌, ಮಿಲ್ಖಾಸಿಂಗ್‌ ಹಾಗೂ ಮೇರಿಕೋಮ್‌ ನಂತರ ಅಭಿನವ್‌ ಬಿಂದ್ರಾ ಕಥೆಯೂ ತೆರೆಯ ಮೇಲೆ ಬರಲಿದೆ.

ಈ ಚಿತ್ರದ ನಂತರ ಶೂಟಿಂಗ್‌ ಕ್ರೀಡೆಯ ಬಗ್ಗೆ ಹೆಚ್ಚು ಪ್ರಚಾರ ಸಿಗಬಲ್ಲದು. ಜನರಿಗೆ ಪ್ರೇರಣೆಯಾಗಬಲ್ಲದು ಎಂದು ಅವರ ಕಥೆಯನ್ನು ಸಿನಿಮಾ ಮಾಡಲಾಗುತ್ತಿದೆ. ಅನಿಲ್‌ ಕಪೂರ್ ಮತ್ತು ಅವರ ಮಗ ಹರ್ಷವರ್ಧನ್‌ ಕಪೂರ್‌  ಈ ಚಿತ್ರದಲ್ಲಿ ಅಭಿನವ್‌ ಆಗಿ ನಟಿಸಲಿದ್ದಾರೆ.

ADVERTISEMENT

ಸೂಕ್ತ ತರಬೇತಿ ದೊರೆತರೆ ಶೂಟಿಂಗ್‌ನಲ್ಲಿ ಭಾರತವು ಪಾರಮ್ಯ ಮೆರೆಯಬಹುದು. ಇದಕ್ಕೆ ಇತ್ತೀಚಿನ ಕಾಮನ್‌ವೆಲ್ತ್‌ ಕ್ರೀಡಾಕೂಟವೇ ಸಾಕ್ಷಿಯಾಗಿದೆ.

ಈ ಚಿತ್ರವು ಭಾರತೀಯ ಯುವ ಜನಾಂಗವು ಶೂಟಿಂಗ್‌ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಬಹುದು ಎಂಬುದು ಸಿನಿ ಮೇಕರ್ಸ್‌ಗಳ ನಿರೀಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.