ADVERTISEMENT

ಬಿಎಂಎಸ್‌ನಲ್ಲಿ ಇ-–ಸಪ್ತಾಹ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಬಿ.ಎಂ. ಶ್ರೀನಿವಾಸಯ್ಯ (ಬಿಎಂಎಸ್) ಎಂಜಿನಿಯರಿಂಗ್‌ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಘಟಕವು ‘ನಾವೀನ್ಯ ಹಾಗೂ ಕ್ರಿಯಾಶೀಲತೆ’ ವಿಷಯ ಕುರಿತುಇ-–ಸಪ್ತಾಹ ಆಯೋಜಿಸಿತ್ತು.

ದೊಡ್ಡ ಬಸವನಗುಡಿ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ನಡೆದ ಸಪ್ತಾಹದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಜಗತ್ತಿನ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ವ್ಯಕ್ತಿಗಳ ನಡುವಿನ ಪರಸ್ಪರ ಅರ್ಥೈಸುವಿಕೆ ಹಾಗೂ ಮಾರುಕಟ್ಟೆ ಕೌಶಲಗಳನ್ನು ಉತ್ತಮಪಡಿಸಿಕೊಳ್ಳಲು ನೆರವಾಯಿತು.

‘ವಿದ್ಯಾರ್ಥಿಗಳ ಸ್ವತಂತ್ರ ಹಾಗೂ ಕ್ರಿಯಾತ್ಮಕ ಆಲೋಚನೆಗಳಿಗೆ ಕಾಲೇಜು ಸದಾ ಪ್ರೋತ್ಸಾಹ ಹಾಗೂ ಪ್ರಾಮುಖ್ಯ ನೀಡುತ್ತಿದ್ದು, ಆ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲೇ ಉದ್ಯಮಶೀಲತಾ ಪರಿಕಲ್ಪನೆಯನ್ನು ಅವರ ಮನಸ್ಸುಗಳಲ್ಲಿ ತುಂಬುವುದು ನಮ್ಮ ಉದ್ದೇಶ ಹಾಗೂ ಇ–-ಸಪ್ತಾಹದ  ಉದ್ದೇಶವೂ ಇದೇ ಆಗಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು.

ಆರ್ಥಿಕ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಚಾರ ಗೋಷ್ಠಿಯನ್ನು ಕೂಡ ಏರ್ಪಡಿಸಲಾಗಿತ್ತು. ಕಾಲೇಜಿನ ನಾಟಕ ತಂಡ ‘ಪ್ರವೃತ್ತಿ’ ಸದಸ್ಯರಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.