ಬೆಂಗಳೂರಿನ ಐಬಿಸ್ ಸಂಸ್ಥೆಯು ಇತ್ತೀಚೆಗಷ್ಟೆ `ಭವಿಷ್ಯ ಅನ್ವೇಷಿಸಿ~ ಎಂಬ ವಿಷಯದೊಂದಿಗೆ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆಂದೇ ಎಂಟರ್‌ಪ್ರಿನರ್ ವೀಕ್ (ಇ-ವೀಕ್) ಎಂಬ ರಾಷ್ಟ್ರೀಯ ಉದ್ಯಮಶೀಲತೆ ಸಪ್ತಾಹ ಹಮ್ಮಿಕೊಂಡಿತ್ತು.
ನಾಲ್ಕು ದಿನ ನಡೆದ ಈ ಸಪ್ತಾಹಕ್ಕೆ ಪ್ರೊ.ಎಸ್. ಬುರಾಗೊಹೈನ್ ಚಾಲನೆ ನೀಡಿದರು. ಅತಿಥಿಯಾಗಿ ಭಾಗವಹಿಸಿದ್ದ ಸಿದ್ಧಾರ್ಥ ಮಂಗಾರಾಂ ಅವರು ಮಾತನಾಡಿ ಉದ್ಯಮಿಗಳು ಎದುರಿಸಬೇಕಾದ ಸವಾಲುಗಳ ಕುರಿತು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿಕೊಟ್ಟರು.
ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ ಕುರಿತು ಕನಸುಗಳನ್ನು ಮತ್ತು ಮಹಾತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಉತ್ತಮ ಅವಕಾಶಗಳು ದೊರೆಯುತ್ತಿವೆ, ಅದನ್ನು ಸದುಪಯೋಗಪಡಿಸಿಕೊಳ್ಳುವ ಕುರಿತು ಆಲೋಚಿಸಬೇಕು ಎಂದು ಐಬಿಎಸ್‌ನ ನಿರ್ದೇಶಕಿ ಲತಾ ಚಕ್ರವರ್ತಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನ್ಯಾಷನಲ್ ಎಂಟರ್‌ಪ್ರಿನರ್‌ಶಿಪ್ ನೆಟ್‌ವರ್ಕ್‌ನ ಸಮಾಲೋಚಕ ಸುನಿಲ್ ಕುಮಾರ್ ಸಾರಂಗಿ ಉಪಸ್ಥಿತರಿದ್ದರು.
ಮೂರನೇ ದಿನ ನಡೆದ `ಬಿಸಿನೆಸ್ ಬಾಜಿಜರ್~ ಸ್ಪರ್ಧೆಯಲ್ಲಿ ವಿವಿಧ ಮ್ಯಾನೇಜ್‌ಮೆಂಟ್ ಶಾಲೆಗಳ ಸುಮಾರು 14 ತಂಡಗಳು ಭಾಗವಹಿಸಿದ್ದರು. ಕೇವಲ ಬಿಸಿನೆಸ್‌ಗೆ ಸಂಬಂಧಪಟ್ಟ ಸ್ಪರ್ಧೆಗಳು ಮಾತ್ರವಲ್ಲದೆ, ಮನರಂಜನೆಗಾಗಿ ಪೇಂಟಿಂಗ್, ಮೆಹಂದಿ ಮತ್ತು ವಿವಿಧ ಆಟಗಳನ್ನೂ ಆಯೋಜಿಸಲಾಗಿತ್ತು. ಅದರಲ್ಲೂ ಇ-ವೀಕ್ ಬಿಸಿನೆಸ್ ಪ್ಲಾನ್ ಮತ್ತು ಐರಿಸ್ ಛಾಯಾಗ್ರಹಣ ಸ್ಪರ್ಧೆ ಹೆಚ್ಚು ಆಸಕ್ತಿದಾಯಕವಾಗಿತ್ತು.
ಬಿಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ಬೆಂಗಳೂರಿನ ಐಐಎಂ, ಐಬಿಎಸ್, ಸಿಂಬಯಾಸಿಸ್ ಇನ್ಸ್‌ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ವೆಲಿಂಗ್‌ಕರ್ ಇನ್ಸ್‌ಟಿಟ್ಯೂಟ್, ಐಎಫ್‌ಐಎಂ ಮತ್ತು ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್ ಕಾಲೇಜುಗಳ ಮಧ್ಯೆ ತೀಕ್ಷ್ಣ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ಐಐಎಂ ತಂಡ ಗೆಲುವು ಸಾಧಿಸಿತು. ಡಾ. ಲತಾ ಚಕ್ರವರ್ತಿ ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.