ADVERTISEMENT

ಬೆಕಂ ಮೇಲೆ ಹೊಗಳಿಕೆಯ ಮಳೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2014, 19:30 IST
Last Updated 23 ಫೆಬ್ರುವರಿ 2014, 19:30 IST
ಬೆಕಂ ಮೇಲೆ ಹೊಗಳಿಕೆಯ ಮಳೆ
ಬೆಕಂ ಮೇಲೆ ಹೊಗಳಿಕೆಯ ಮಳೆ   

‘ಮನೆಯಲ್ಲಿದ್ದಾಗ ನಾನು ಮತ್ತು ಡೇವಿಡ್‌ ಬೆಕಂ ಇಬ್ಬರೂ ಸಮಾನರು’– ಹೀಗೆನ್ನುತ್ತಿದ್ದಾರೆ ವಿಕ್ಟೋರಿಯಾ ಬೆಕಂ. ಗಾಯಕಿ, ಫ್ಯಾಷನ್‌ ಡಿಸೈನರ್‌ ಆಗಿ ಜನಪ್ರಿಯತೆ ಗಳಿಸಿರುವ ವಿಕ್ಟೋರಿಯಾ ಬೆಕಂ ಅವರು ತಮ್ಮ ಪತಿ ಡೇವಿಡ್‌ ಬೆಕಂ ಮತ್ತು ಅಮೆರಿಕ ವಾಸದ ಬಗ್ಗೆ ಮಾತನಾಡಿದ್ದಾರೆ.

ಬೆಕಂ ದಂಪತಿ ತಮ್ಮ ತಮ್ಮ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದವರು. ಆದರೆ, ಡೇವಿಕ್‌ ಬೆಕಂ ಮತ್ತು ವಿಕ್ಟೋರಿಯಾ ಬೆಕಂ ಇಬ್ಬರೂ ಮನೆಯಲ್ಲಿದ್ದಾಗ ತಮ್ಮ ಜನಪ್ರಿಯತೆಯ ಗುಂಗನ್ನು ಬದಿಗಿಟ್ಟು ಒಬ್ಬರನ್ನೊಬ್ಬರು ಸಮಾನರಾಗಿ ಪರಿಗಣಿಸುತ್ತಾರಂತೆ. ವಿಕ್ಟೋರಿಯಾ ಹೇಳುವಂತೆ, ತಾವು ಈವರೆಗೆ ಭೇಟಿಯಾಗಿರುವವರಲ್ಲೇ ಡೇವಿಡ್‌ ಬೆಕಂ ಅತ್ಯಂತ ಅದ್ಭುತ ಮನುಷ್ಯ.

‘ಡೇವಿಡ್‌ ತುಂಬ ಒಳ್ಳೆಯ ಮನುಷ್ಯ. ಇತರರನ್ನು ಗೌರವಿಸುವ ಅವರ ಗುಣ ನನಗೆ ಇಷ್ಟ. ಹಾಗೆಯೇ, ಅವರು ಒಳ್ಳೆಯ ತಂದೆಯೂ ಹೌದು. ಪ್ರತಿಭಾವಂತ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ನನ್ನ ಮೆಚ್ಚಿನ ಗಂಡ. ಅವರನ್ನು ಗಂಡನಾಗಿ ಪಡೆದದ್ದು ನನ್ನ ಅದೃಷ್ಟ. ಕಳೆದ ಹಲವು ವರ್ಷಗಳಿಂದ ನಾನು ಅವರಿಗೆ ಒತ್ತಾಸೆಯಾಗಿ ನಿಂತಿದ್ದೇನೆ. ನನ್ನನ್ನು ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಪರಸ್ಪರರನ್ನು ಅರಿತು ನಡೆವ ನಮ್ಮಿಬ್ಬರ ನಡುವೆ ಯಾವುದೇ ಹಮ್ಮು ಬಿಮ್ಮು ಇಲ್ಲ. ಮನೆಯಲ್ಲಿದ್ದಾಗ ನಾವಿಬ್ಬರೂ ಸಮಾನರು’ ಎಂದಿದ್ದಾರೆ ವಿಕ್ಟೋರಿಯಾ.

‘ಕಳೆದ ಆರು ವರ್ಷಗಳಿಂದ ಅಮೆರಿಕದಲ್ಲಿ ಇಬ್ಬರೂ ವಾಸಿಸುತ್ತಿದ್ದೇವೆ, ಭರ್ತಿ ಆರು ವರ್ಷದಲ್ಲಿ ಮನಸ್ಸಿಗೆ ಒಂದು ಚೂರೂ ಬೇಜಾರಾಗಿಲ್ಲ. ಸಂತೋಷದಿಂದ ಕಾಲ ಕಳೆದಿದ್ದೇವೆ. ಅಮೆರಿಕ ವಾಸ ನಮ್ಮಿಬ್ಬರಿಗೂ ಅತ್ಯಂತ ಖುಷಿ ಕೊಟ್ಟಿದೆ’ ಎಂದಿದ್ದಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.