ADVERTISEMENT

ಬೆಳದಿಂಗಳ ಊಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ಕಾರ್ಪೊರೇಟ್ ಕಂಪೆನಿ ಉದ್ಯೋಗಿಗಳು, ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆಂದೇ `ಡೆಗಾ ಫಾರ್ಮ್ಸ' ಪ್ರತಿ ತಿಂಗಳು ವಿಶೇಷ  `ಬೆಳದಿಂಗಳ ಊಟ'  ಕಾರ್ಯಕ್ರಮವನ್ನು ಏರ್ಪಡಿಸಲು ನಿರ್ಧರಿಸಿದೆ.

ಕೆಲಸದ ಒತ್ತಡ ನಿವಾರಣೆಯೊಂದಿಗೆ ತಮ್ಮ ಜೀವನದ ನಡಿಗೆಯಲ್ಲಿ ಸಮತೋಲನ ಹೊಂದುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದರ ಮೊದಲನೆ ಕಾರ್ಯಕ್ರಮ ಶನಿವಾರ (ಜುಲೈ 20) ಆಯೋಜಿತವಾಗಿದೆ.

ಸಾವಯವ ಕೃಷಿ ಪದ್ಧತಿಯ ಮೂಲಕ ಬೆಳೆದ ಪೌಷ್ಟಿಕ ತರಕಾರಿ, ಸೊಪ್ಪುಗಳಿಂದ ತಯಾರಿಸಿದ ಆರೋಗ್ಯಕರ, ರುಚಿಕರ ಆಹಾರವನ್ನು ಮಣ್ಣಿನ ಮಡಿಕೆಯಲ್ಲಿ ನೀಡಲಾಗುತ್ತದೆ. ಹಿನ್ನೆಲೆಯಲ್ಲಿ ಟೈಮ್ಸ ಹಾಗೂ ಅರವಿಂದೋ ಸಮೂಹ ವಿರಚಿತ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಅನುಭವಿಸುವ ಅವಕಾಶವಿರುತ್ತದೆ. ಜಿಡ್ಡು ಕೃಷ್ಣಮೂರ್ತಿ ಅವರ ಬದುಕು, ಉಪನ್ಯಾಸಗಳ ಕುರಿತಂತೆ ಡೆಗಾ ಆರ್ಟ್ಸ್ ತಯಾರಿಸಿರುವ ಧ್ಯಾನ ಹಾಗೂ ಜೀವನ ಕುರಿತ ವೀಡಿಯೊ ಸಾಕ್ಷ್ಯಚಿತ್ರಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ. ವೈಯಕ್ತಿಕ ಆರೋಗ್ಯ ಹಾಗೂ ಉತ್ತಮ ಜೀವನಕ್ಕಾಗಿ ಹಲವು ಉಪಯೋಗಕಾರಿ ಸಲಹೆಗಳಿರುವ ರಾಜೀವ್ ದೀಕ್ಷಿತ್ ಅವರ ಸೀಡಿಯನ್ನು ವಿತರಿಸಲಾಗುತ್ತದೆ. ಮಾಹಿತಿಗೆ:  99457 76603 (ಭಾನು) ಸಂಪರ್ಕಿಸಿ.

ಸ್ಥಳ: ಡೆಗಾ ಫಾರ್ಮ್ಸ, ಹೊಸೂರು.  ಸಂಜೆ 5ರಿಂದ ರಾತ್ರಿ 8.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.