ADVERTISEMENT

ಬೇಸಿಗೆ ನೃತ್ಯ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಬೇಸಿಗೆ ನೃತ್ಯ ಕಾರ್ಯಾಗಾರ
ಬೇಸಿಗೆ ನೃತ್ಯ ಕಾರ್ಯಾಗಾರ   

ಖ್ಯಾತ ಕಥಕ್ ನೃತ್ಯ ಕಲಾವಿದೆ ಮಾಯಾರಾವ್ ಮತ್ತು ಅವರ ಪುತ್ರಿ ಮಧು ನಟರಾಜ್ ನೇತೃತ್ವದ ನಾಟ್ಯ ಸ್ಟೆಮ್ ಡಾನ್ಸ್ ಕಂಪೆನಿ, ಯುರೋಪ್‌ನ ಪ್ರಮುಖ ಐದು ಡಾನ್ಸ್ ಕಂಪೆನಿಗಳಲ್ಲಿ ಒಂದಾದ ವೇಲ್ಸ್‌ನ ನ್ಯಾಷನಲ್ ಡಾನ್ಸ್ ಕಂಪೆನಿ ಸಹಯೋಗದಲ್ಲಿ ಮೇ 24ರಿಂದ ಜೂನ್ 4ರವರೆಗೆ ‘ಡಾನ್ಸ್‌ಫ್ಲುಯೆನ್ಸ್’ ನೃತ್ಯ ಕಾರ್ಯಾಗಾರ ಏರ್ಪಡಿಸಿದೆ.

ಬೆಂಗಳೂರಿನ ನೃತ್ಯ ಕಲಾವಿದರಿಗೆ ಆಂಗಿಕ ಅಭಿನಯ ಮತ್ತು ಚಲನೆಯಲ್ಲಿ ಅಂತರ್‌ರಾಷ್ಟ್ರೀಯ ಅನುಭವ ನೀಡುವುದು ಇದರ ಉದ್ದೇಶ. ಎರಡೂ ಸಂಸ್ಥೆಯ ನೃತ್ಯ ಸಂಯೋಜಕರು ತಮ್ಮ ಅನುಭವ ಧಾರೆ ಎರೆದು ಆಂಗಿಕ ಚಲನೆಯ ಮಟ್ಟುಗಳನ್ನು ರೂಪಿಸಿದ್ದಾರೆ. ಹದಿಹರೆಯದ ಉತ್ಸಾಹಿ ನೃತ್ಯಗಾರರಿಗೆ ಈ ಕಾರ್ಯಾಗಾರ ವಿಶಿಷ್ಟ ಅನುಭವ ನೀಡಲಿದೆ.

ನೃತ್ಯದಲ್ಲಿ ಆರಂಭಿಕ ಹೆಜ್ಜೆ ಇಡುತ್ತಿರುವ 13 ರಿಂದ 17 ವರ್ಷದವರು ಮತ್ತು 18 ರಿಂದ 24 ವರ್ಷದೊಳಗಿನ ಉದಯೋನ್ಮುಖ ನೃತ್ಯ ಕಲಾವಿದರಿಗೆ ಎರಡು ತಂಡಗಳಲ್ಲಿ ಕಾರ್ಯಾಗಾರ ನಡೆಯಲಿವೆ. ಹೆಸರು ನೋಂದಾಯಿಸಲು ಏಪ್ರಿಲ್ 25 ಕೊನೆಯ ದಿನ. ಏಪ್ರಿಲ್ 30ರಂದು ಆಡಿಷನ್ ನಡೆಯಲಿದೆ.ವಿವರಗಳಿಗೆ ರಮ್ಯಾ ನಾಗರಾಜ್ ಅವರನ್ನು  ದೂ. 97423 91724 ಮೂಲಕ  ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.