ADVERTISEMENT

ಬೇಸಿಗೆ ಮೇಳ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಬೇಸಿಗೆ ರಜೆ ಬಂತೆಂದರೆ ನಗರದೆಲ್ಲೆಡೆ ಶಿಬಿರಗಳದ್ದೇ ಕಾರುಬಾರು. ಮಕ್ಕಳನ್ನು ಆಕರ್ಷಿಸುವತ್ತ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಕನ್ನಡ ಸಾಹಿತ್ಯ ಕೂಟವು ಸಾಂಸ್ಕೃತಿಕ ಬೇಸಿಗೆ ಮೇಳವನ್ನು ಏರ್ಪಡಿಸಿದೆ.

ಇಲ್ಲಿ ಮಕ್ಕಳಿಗಾಗಿ ಆಟೋಟಗಳ ಜೊತೆ ಭಾರತೀಯ ಕ್ರಾಫ್ಟ್ ಮೇಳ (ಕರಕುಶಲ), ಕೈಮಗ್ಗದ ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೂ ಇದೆ. 75 ಮಳಿಗೆಗಳಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸುವ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

ಮೈಸೂರಿನ ಇನ್ಲೇ ಪೇಂಟಿಂಗ್ ಫ್ರೇಮ್‌ಗಳು, ಜೈಪುರದ ಝರೋಕ ಪ್ರೇಮ್‌ಗಳು, ಗೋಡೆ ಗಡಿಯಾರ, ಮರದ ಮೂರ್ತಿಗಳು, ತೂಗುಯ್ಯಾಲೆ, ತಂಜಾವೂರು ಪೇಂಟಿಂಗ್, ಉತ್ತರ ಪ್ರದೇಶದ ಸಾರಂಗಪುರದ ಕಾರ್ವ್ಡ್ ಮರದ ಪೀಠೋಪಕರಣಗಳು, ಕಬ್ಬಿಣ ಮತ್ತು ಮರದ ಪೀಠೋಪಕರಣಗಳು, ಹುಬ್ಬಳ್ಳಿ ಸೀರೆಗಳು, ಬಂಜಾರ ಬ್ಯಾಗು ಇನ್ನೂ ಹಲವಾರು ವಸ್ತುಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುತ್ತದೆ.

ಮೇ 6ರವರೆಗೆ ಮೇಳ ನಡೆಯಲಿದ್ದು, ಸಂಜೆ 4ರಿಂದ ರಾತ್ರಿ 9.30ರವರೆಗೆ ತೆರೆದಿರುತ್ತದೆ. ಸ್ಥಳ: ಬಿ. ಇ. ಎಲ್. ಮಾರುಕಟ್ಟೆ ಮೈದಾನ, ಜಾಲಹಳ್ಳಿ ಮುಖ್ಯ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.