ADVERTISEMENT

ಭಾರತೀಯ ವಿದ್ಯಾಭವನ ವಜ್ರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST
ಭಾರತೀಯ ವಿದ್ಯಾಭವನ ವಜ್ರ ಮಹೋತ್ಸವ
ಭಾರತೀಯ ವಿದ್ಯಾಭವನ ವಜ್ರ ಮಹೋತ್ಸವ   

ಭಾರತೀಯ ವಿದ್ಯಾಭವನದ ಸಂಸ್ಥಾಪಕ ಕೆ.ಎಂ.ಮುನ್ಷಿ ಅವರ 125ನೇ ವರ್ಷಾಚರಣೆ ಸಂದರ್ಭದಲ್ಲಿ ಭವನದ ಬೆಂಗಳೂರು ಕೇಂದ್ರವು 60ನೇ ವಾರ್ಷಿಕೋತ್ಸವ ಪ್ರಯುಕ್ತ ಸೋಮವಾರದಿಂದ ಬುಧವಾರದವರೆಗೆ (ಡಿ.17ರಿಂದ 19) ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಉತ್ಸವ ನಡೆಯಲಿದೆ.

ಸೋಮವಾರ (ಡಿ.17) ಸಾಂದೀಪಿನಿ ಗುರುಕುಲದ 150 ವಿದ್ಯಾರ್ಥಿಗಳು, ರೋಹಿಣಿ ಚಕ್ರವರ್ತಿ ಅವರ ನೇತೃತ್ವದಲ್ಲಿ `ಭಗವದ್ಗೀತಾ ಸಂಕೀರ್ತನ' ಎಂಬ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇಸ್ಕಾನ್‌ನ ನಿರ್ದೇಶಕ ಶ್ರೀ ತಿರು ಸ್ವಾಮೀಜಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಂಗಳವಾರ (ಡಿ.18) ಅಷ್ಟವಧಾನ ಕಾರ್ಯಕ್ರಮವಿರುತ್ತದೆ. ಅತಿಥಿ: ವಿದುಷಿ ಡಾ.ಟಿ.ಎಸ್. ಸತ್ಯವತಿ. ಬುಧವಾರ (ಡಿ.19) ವೀಣಾ ವಾದಕಿ ಗೋದಾ ಅನಿರುದ್ಧ್ ರಾಘವನ್ ಅವರಿಂದ ವೀಣಾ ವಾದನ. ನಂತರ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರಿಂದ `ಮಾಸ್ಟರಾಯನ' ನಾಟಕ ಪ್ರದರ್ಶನ. `ಲಂಚಾವತಾರ' ಹಾಗೂ `ಮಕ್ಮಲ್ ಟೋಪಿ'ಯ ಆಯ್ದ ತುಣುಕುಗಳನ್ನು ಒಳಗೊಂಡ ನಾಟಕ ಇದಾಗಿದೆ. ಇವಿಷ್ಟೇ ಅಲ್ಲದೇ ಮಾತನಾಡುವ ಗೊಂಬೆ ಹಾಗೂ ಮ್ಯಾಜಿಕ್ ಶೋ ಸಹ ಆಯೋಜಿಸಲಾಗಿದೆ.

ಕಾರ್ಯಕ್ರಮದ ಪಾಸ್‌ಗಳನ್ನು ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಪಡೆಯಬಹುದು ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಕೆ.ಸಿ. ಪೆಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಮಯ: ಪ್ರತಿ ದಿನ ಸಂಜೆ 6ರಿಂದ 8. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.