ADVERTISEMENT

ಭಿನ್ನ ಆಲೋಚನೆಗಳ ಪರ್ವ

ಕಾವ್ಯ ಸಮತಳ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ಸೊಳ್ಳೆಯೊಂದು ತನ್ನ ಆಹಾರಕ್ಕಾಗಿ ಗೂಗಲ್‌ ಮ್ಯಾಪ್‌ ಬಳಸಿ ರೆಸ್ಟೋರೆಂಟ್‌, ಹೋಟೆಲ್‌ಗಳು ಎಲ್ಲೆಲ್ಲಿವೆ ಎಂದು ಹುಡುಕಾಟ ನಡೆಸುವುದು! ಮೌಸ್‌(ಇಲಿ) ಫೇಸ್‌ಬುಕ್‌ ಬಳಸುವುದು! ಮಂದಗತಿಯಲ್ಲಿ ತೆವಳುವ ಬಸವನಹುಳು ಓಲಾ ಶೇರ್‌ ಬಳಸುವುದು! ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಪ್ರಾಣಿಗಳು ತಂತ್ರಜ್ಞಾನವನ್ನು ಹೇಗೆಲ್ಲಾ ಉಪಯೋಗಿಸಬಹುದು ಎಂಬ ಕಲ್ಪನೆಯು ಲೋಹಿತ್‌ ಅವರ ಕುಂಚದಲ್ಲಿ ಚಿತ್ರಕಲೆಯಾಗಿ ಹೊರಹೊಮ್ಮಿವೆ.

ಗುಂಪಾಗಿ ಜೀವಿಸುವ ಹಂದಿ ಮತ್ತು ಸ್ವಚ್ಛತೆ ಬಗ್ಗೆ ತಿಳಿಸುವಂ, ಹಂಪಿಯನ್ನು ವರ್ಣಿಸುವ, ಮಳೆಗಾಗಿ ದೇವರನ್ನು ಪ್ರಾರ್ಥಿಸುವ ಪದ್ಧತಿಯನ್ನು ವಿವರಿಸುವವಂತಹ, ಕಿನ್ನಾಳ ಕಲೆಯ ಚಿತ್ರಗಳು, ಅಚ್ಚರಿಗೊಳಿಸುವ ಅಗೋರಿಗಳ ಆಕ್ರೆಲಿಕ್‌ ಪೇಂಟಿಂಗ್‌ಗಳು, ವೆಂಕಟ‍ಪ್ಪ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.‌

‘ಮನೆಯವರ ಪ್ರೋತ್ಸಾಹದೊಂದಿಗೆ ತನಗಾದ ಅನುಭವಗಳನ್ನು ಕಲೆಯಾಗಿ ಮಾರ್ಪಡಿಸುವುದು, ಭಿನ್ನ ಪ್ರಯೋಗಗಳಿಗೆ ತನ್ನನ್ನು ಅರ್ಪಿಸಿಕೊಳ್ಳುವುದು ಇಷ್ಟ’ ಎನ್ನುವ ಲೋಹಿತ್‌, ದಕ್ಷಿಣ ಕನ್ನಡದ ಪುತ್ತೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೃಶ್ಯ ಕಲಾ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ADVERTISEMENT

ಕರ್ನಾಟಕದ ಗ್ರಾಮೀಣ ಭಾಗದ ಯವ ಚಿತ್ರಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಆರ್ಟ್‌ಕ್ರೇಡಲ್‌ ಸಂಸ್ಥೆಯು ತನ್ನ ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಲಾ ಪ್ರದರ್ಶನವನ್ನು ಏರ್ಪಡಿಸಿದೆ. ಈ ಸಂಸ್ಥೆಯು ರಾಜ್ಯದೆಲ್ಲೆಡೆ ಗ್ರಾಮೀಣ ಪ್ರದೇಶದ ಚಿತ್ರಕಲಾವಿದರ ಕಲೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಚಿತ್ರಕಲೆಯ ಮೂಲಕ ಹೊಸ ಹೊಸ ಪರಿಕಲ್ಪನೆಗಳು ಹುಟ್ಟಿವೆ. ಹಾಗಾಗಿ ಕಲೆಯನ್ನು ಪ್ರೋತ್ಸಾಹಿಸಬೇಕು. ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಈ ಕಲೆಗಳು ಸಹಕಾರಿ ಎನ್ನುತ್ತಾರೆ’ ಆರ್ಟ್‌ಕ್ರೆಡಲ್‌ ಸಂಸ್ಥೆಯ ಸಂಸ್ಥಾಪಕ ತ್ರಿಲೋಕ್‌.

‘ಈ ಬಾರಿ ಗ್ರಾಮೀಣ ಯುವ ಪ್ರತಿಭೆಗಳಾದ ಲೋಹಿತ್‌, ಮುತ್ತು ಎಂ. ನಗರಾಳ್‌, ಗಂಗಾಧರ್‌ ಬಂದನಾವರ್‌, ನಾಗರಾಜ್‌ ಬಾಕಳೆ, ಪ್ರವೀಣ್‌ ಗಾಯಕಾರ್‌ ಅವರ ಕಲಾಕೃತಿಗಳನ್ನು ಪ್ರದರ್ಶನಗೊಳ್ಳುತ್ತಿವೆ’ ಎಂದರು.

ಕಲಾಕೃತಿಗಳ ಪ್ರದರ್ಶನ
ಸ್ಥಳ: ವೆಂಕಟಪ್ಪ ಆರ್ಟ್‌ ಗ್ಯಾಲರಿ
ಸಮಯ: ಬೆಳಿಗ್ಗೆ 11ರಿಂದ 6
ಕೊನೆಯ ದಿನ: ಜೂನ್‌ 13
ಮಾಹಿತಿಗೆ: 99025 76363 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.