ADVERTISEMENT

ಭೀಮಾ ಬಂಗಾರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST
ಭೀಮಾ ಬಂಗಾರ
ಭೀಮಾ ಬಂಗಾರ   

ಈಗ ನಮ್ಮ ಸುತ್ತಲಿನ ಜಗತ್ತಿನಲ್ಲಿ ಯುವ ಶಕ್ತಿ ಝೇಂಕರಿಸುತ್ತಿದೆ. ಇಂದಿನ ಯುವ ಪೀಳಿಗೆ ಮತ್ತು ಆಧುನಿಕ ಪೀಳಿಗೆಯನ್ನು ಸೆಳೆಯುವ ಉದ್ದೇಶದಿಂದ ಭೀಮಾ ಎಚ್‌ಬಿಆರ್ ಬಡಾವಣೆ ಹೆಣ್ಣೂರು ವೃತ್ತದ ಬಳಿ ಹೊಸ ಮಳಿಗೆ ತೆರೆದಿದೆ.

ತನ್ನ ವಿಶಿಷ್ಟ ವಾಸ್ತುಶೈಲಿ, ಪಾರಂಪರಿಕ ನೋಟದಿಂದ ಹೊರಭಾಗದಿಂದಲೇ ಗ್ರಾಹಕರನ್ನು ಆಕರ್ಷಿಸುವ ಈ ಮಳಿಗೆಯ ಒಳಗೆ ಕಾಲಿಟ್ಟರೆ ಅನನ್ಯ ಕಲಾವಂತಿಕೆಯ ಆಭರಣಗಳು.

ಚೆನ್ನ, ಬೆಳ್ಳಿ, ಪ್ಲಾಟಿನಂನಲ್ಲಿ ಸಿದ್ಧಪಡಿಸಿದ ಆಧುನಿಕ ವಿನ್ಯಾಸದ ಹಗುರ ಆಭರಣಗಳು ಯುವ ಗ್ರಾಹಕರನ್ನು ಸೆಳೆಯುವಂತಿವೆ. ಉನ್ನತ ಗುಣಮಟ್ಟದ ವಜ್ರ, ಮುತ್ತು, ಸಮಕಾಲೀನ ಆಭರಣಗಳು, ಜನ್ಮರಾಶಿಗೆ ಹೊಂದಿಕೆಯಾಗುವ ಆಭರಣಗಳು, ಮದುವೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳಿಗೆ ತೊಡುವ ಭಾರಿ ಆಭರಣಗಳು, ಕಚೇರಿಗೆ ಹೋಗುವಾಗ ತೊಡುವ ಟ್ರೆಂಡಿ ಆಭರಣಗಳು ಎಲ್ಲವೂ ಇಲ್ಲಿವೆ.

ಉತ್ತರ ಭಾರತೀಯ ಶೈಲಿಯ ಕುಂದನ್, ಆಧ್ಯಾತ್ಮಿಕತೆಯತ್ತ ವಾಲಿದವರಿಗೆ, ಮಕ್ಕಳಿ, ಶತಮಾನಗಳ ಹಿಂದಿನ ಲುಕ್ ಕೊಡುವ ಆ್ಯಂಟಿಕ್,  ವಧುವಿನ ವಿಶಿಷ್ಟ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ.

ಈಗ ಮದುವೆ ಎಂಬುದು ಸಾಂಪ್ರದಾಯಿಕ ಸಮಾರಂಭವಾಗಿ ಉಳಿದಿಲ್ಲ. ಇಂದಿನ ಮದುಮಗಳು ಎಲ್ಲವೂ ವಿಶಿಷ್ಟವಾಗಿರಬೇಕು ಎಂದು ಬಯಸುತ್ತಾಳೆ. ಇಂಥ ಫ್ಯಾಷನ್ ಪ್ರಿಯ ವಧುವಿನ ಮನಮೆಚ್ಚಿಸುವಂತಹ ಆಭರಣ ಸರಣಿಯೊಂದನ್ನು ಭೀಮಾ ಸಿದ್ಧಪಡಿಸಿದೆ.
 
ಸಮಕಾಲೀನ ಸಂವೇದನೆಗಳನ್ನು ಮನದಲ್ಲಿಟ್ಟುಕೊಂಡು ಚಿನ್ನ, ವಜ್ರ ಹಾಗೂ ಪ್ಲಾಟಿನಂನಲ್ಲಿ ಆಭರಣಗಳನ್ನು ರೂಪಿಸಲಾಗಿದೆ. ಇಂಡೋ-ಯುರೋಪಿಯನ್ ಶೈಲಿಯಿಂದ ಪ್ರೇರಿತವಾದ `ವಿವಿಯಾನಾ~ ವಜ್ರದ ಆಭರಣವೂ ಇದರಲ್ಲಿ ಸೇರಿದೆ.

ಉಡುಪಿ ಮೂಲದ ಭೀಮಾ ಆಭರಣಗಳು 85 ವರ್ಷಗಳ ವಿಶ್ವಾಸ, ನಂಬಿಕೆಯ ಪ್ರತೀಕ. ಭೀಮಾದ ಪ್ರತಿ ಆಭರಣದ ಗುಣಮಟ್ಟವೂ ಪರೀಕ್ಷೆಗೆ ಒಳಗಾಗಿರುತ್ತದೆ. ಹೊರಗಿನ ಸಂಸ್ಥೆಗಳಿಂದಲೂ ಸಹ ಗುಣಮಟ್ಟ ತಪಾಸಣೆ ಮಾಡಿಸಲಾಗುತ್ತದೆ ಎನ್ನುತ್ತಾರೆ ಭೀಮಾದ ಬಿ. ಕೃಷ್ಣನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.