ADVERTISEMENT

ಮಕ್ಕಳ ಬೇಸಿಗೆ ಶಿಬಿರ, ಕವನ ವಾಚನ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:30 IST
Last Updated 22 ಮೇ 2018, 19:30 IST

ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಪ್ರತಿಷ್ಠಾನ ಟ್ರಸ್ಟ್‌ ತನ್ನ ಬೆಳ್ಳಿಹಬ್ಬದ ವಿಶೇಷ ಕಾರ್ಯಕ್ರಮವಾಗಿ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 9ನೇ ಸಮ್ಮೇಳನದಲ್ಲಿ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ. ಮೇ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮವು ನಡೆಯಲಿದ್ದು, ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. 

ಸಾಂಸ್ಕೃತಿಕ ಶಿಬಿರ ನೋಡಿ – ಕಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವವರು 9ರಿಂದ 10 ಗಂಟೆಯೊಳಗೆ ಸ್ವವಿವರ, ವಿಳಾಸ, ದೂರವಾಣಿ ಹಾಗೂ 2 ಫೋಟೊಗಳೊಂದಿಗೆ ನೋಂದಾಯಿಸಿಕೊಳ್ಳಬಹುದು. ಮಕ್ಕಳ ಜೊತೆ ಪೋಷಕರೂ ಭಾಗವಹಿಸಬಹುದು. ಭಾಗವಹಿಸಿದವರಿಗೆ ಬೇಸಿಗೆ ಶಿಬಿರದ ಪ್ರಮಾಣ ಪತ್ರ ನೀಡಲಾಗುವುದು.

ಪ್ರತಿ ಕವಿಗಳಿಗೆ 3 ಚುಟುಕು ಕವಿತೆ ಅಥವಾ ಒಂದು ಕವಿತೆ ವಾಚನಕ್ಕೆ ಅವಕಾಶವಿದೆ. ಓದುವ ಕವಿತೆಯ ಒಂದು ಪ್ರತಿಯೊಂದಿಗೆ ತಮ್ಮ ಸಂಪೂರ್ಣ ಬಯೋಡೇಟಾ, ವಿಳಾಸ, ದೂರವಾಣಿ ಹಾಗೂ 2 ಪಾಸ್‌ಪೋರ್ಟ್‌ ಅಳತೆಯ ಫೋಟೊ, ನೇರವಾಗಿ ಬಂದು ನೋಂದಾಯಿಸಿಕೊಳ್ಳಬಹುದು. ₹300 ಪ್ರವೇಶ ಶುಲ್ಕ

ADVERTISEMENT

ಆಯೋಜನೆ: ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಪ್ರತಿಷ್ಠಾನ. ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ. ಬೆಳಿಗ್ಗೆ 9.

ಮಾಹಿತಿಗೆ: 98453 07327

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.