ADVERTISEMENT

ಮಣಪ್ಪುರಂ ಮಿಸ್ ಕ್ವೀನ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಚಿನ್ನದ ಮೇಲೆ ಸಾಲ ನೀಡುವ ದೇಶದ ಅತಿದೊಡ್ಡ ಕಂಪೆನಿಯಾದ ಮಣಪ್ಪುರಂ ಈಗ ಸೌಂದರ್ಯ ಸ್ಪರ್ಧೆಗೂ ಕಾಲಿಟ್ಟಿದೆ ‘ಪೆಗಾಸಸ್’ ಸಹಯೋಗದಲ್ಲಿ ‘ಮಿಸ್ ಕ್ವೀನ್ ಆಫ್ ಇಂಡಿಯಾ 2011’ ಸ್ಪರ್ಧೆ ಏರ್ಪಡಿಸಿದೆ.

ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಿಂದ ತಲಾ ನಾಲ್ಕು ಸ್ಪರ್ಧಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿದೆ. ನಿಕಿತಾ ನಾರಾಯಣನ್, ಐಶ್ವರ್ಯ ಮುರಳೀಧರನ್, ದಿವ್ಯಾ ಎಂ.ಎಸ್ ಮತ್ತು ಡೆಂಜಿಲಿನಾ ಬ್ರೌನ್ ದಕ್ಷಿಣ ವಲಯದಿಂದ ಆಯ್ಕೆಯಾಗಿದ್ದಾರೆ.

ಮಾರ್ಚ್ 9ರ ಸಂಜೆ 6.30ಕ್ಕೆ ಬೆಂಗಳೂರಿನ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ಫೈನಲ್ಸ್. ಭರಪೂರ ಮನರಂಜನೆ. ಕಣ್ಣಿಗೆ ಹಬ್ಬ. ಮಣಪ್ಪುರಂ ಮಿಸ್ ಕ್ವೀನ್ ಕಿರೀಟ ಧರಿಸಿದ ಸುಂದರಿ 2 ಲಕ್ಷ ಬಹುಮಾನ ಪಡೆಯಲಿದ್ದಾಳೆ. ರನ್ನರ್ ಅಪ್ ಸುಂದರಿ 50 ಸಾವಿರ, 2ನೇ ರನ್ನರ್ ಅಪ್ ಆದ ಯುವತಿ 35 ಸಾವಿರ ನಗದು ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.