ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಕನ್ನಡ ಭವನ, ಜೆ. ಸಿ. ರಸ್ತೆ. ತಿಂಗಳ ಅತಿಥಿಯೊಂದಿಗೆ ಸಂವಾದ ಕಾರ್ಯಕ್ರಮ.
ತಿಂಗಳ ಅತಿಥಿ- ಗ್ರಾಫಿಕ್ ಕಲಾವಿದ ಡಾ. ಸಿ ಚಂದ್ರಶೇಖರ. ಶನಿವಾರ ಸಂಜೆ 4.
ಸ್ವಾತಂತ್ರ್ಯಾ ನಂತರದ ತಲೆಮಾರಿಗೆ ಸೇರಿದ ಕರ್ನಾಟಕದ ಮೊದಲ ಗ್ರಾಫಿಕ್ ಕಲಾವಿದರು ಡಾ. ಸಿ. ಚಂದ್ರಶೇಖರ. ಸಮೂಹ, ಏಕ ವ್ಯಕ್ತಿ ಕಲಾ ಪ್ರದರ್ಶನಗಳ ಜೊತೆಗೆ ಆರು ಬಾರಿ ರಾಷ್ಟ್ರೀಯ ಲಲಿತಕಲಾ ಪ್ರದರ್ಶನಕ್ಕೆ, ಎರಡು ಬಾರಿ ಭೂಪಾಲ್‌ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಬೈನಾಲೆ ಕಲಾಪ್ರದರ್ಶನದಲ್ಲಿ ಇವರ ಕಲೆಗಳು ಪ್ರದರ್ಶನಗೊಂಡಿವೆ. ಕನ್ನಡ ವಿವಿಯ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರಾಗಿ, ಅನೇಕ ವಿವಿಗಳ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕಲಾಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.