ಮಹಿಳಾ ದಿನದ ಸಂಭ್ರಮದಲ್ಲಿ ನಗರದಲ್ಲಿ ಮಂಗಳವಾರ ಅಸಂಖ್ಯಾತ ಕಾರ್ಯಕ್ರಮಗಳು. ಆದರೆ, ಹೆಬ್ಬಾಳ, ಹೆಗಡೆ ನಗರದ ಮಧ್ಯ ಇರುವ ಬೈಪನಹಳ್ಳಿಯಲ್ಲಿ ಬೆಳಿಗ್ಗೆ 10.30ಕ್ಕೆ ವಿಶಿಷ್ಟ ಕಾರ್ಯಕ್ರಮ. ವಿವಿಧ ಕ್ಷೇತ್ರಗಳ ಮಹಿಳಾ ಉದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳ ಮಹಿಳಾ ಮುಖ್ಯಸ್ಥರೆಲ್ಲ ಅಲ್ಲಿ ಒಗ್ಗೂಡಲಿದ್ದಾರೆ. ‘ವಿಮೆನ್ ಬಿಲ್ಡ್ 2011’ ಯೋಜನೆ ಅಡಿ ಜೀವನಕ್ಕೆ ಯಾವುದೇ ಆಸರೆ ಇಲ್ಲದ ನಾಲ್ಕು ವಿಧವೆಯರಿಗೆ ಸ್ವತಃ ಮನೆ ನಿರ್ಮಿಸಿಕೊಡಲಿದ್ದಾರೆ. ಈ ನಾಲ್ಕು ಮನೆಗಳಿಗೆ ನಾಳೆ ಅಲ್ಲಿ ಅಡಿಪಾಯ ಏಳಲಿದೆ. ‘ಟಿಂಕೇನ್’ ಈ ಕಾರ್ಯಕ್ಕೆ ಸಹಯೋಗ ನೀಡುತ್ತಿದೆ.
ಇಂಥದ್ದೊಂದು ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟಿರುವುದು ಹೆಬಿಟೆಟ್ ಫಾರ್ ಹ್ಯುಮಾನಿಟಿ ಸಂಸ್ಥೆ. ವಸತಿ ವಲಯದಲ್ಲಿ ಬಡತನ ನಿವಾರಿಸಬೇಕು ಎಂಬ ಉದ್ದೇಶದಿಂದ ಹುಟ್ಟಿರುವ ಜಾಗತಿಕ ಸಂಸ್ಥೆ. 100ಕ್ಕೂ ಹೆಚ್ಚು ದೇಶಗಳಲ್ಲಿ 24,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ‘ವಿಮೆನ್ ಬಿಲ್ಡ್’ ಹೆಬಿಟೆಟ್‌ನ ಮಹಿಳಾ ವಿಭಾಗ. ಮನೆ, ಸಮುದಾಯಗಳನ್ನು ನಿರ್ಮಿಸಿ ಬಡ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ಕಲ್ಪಿಸುವ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸೇವೆ ಸಲ್ಲಿಸಲು ಮುಕ್ತ ಅವಕಾಶ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.