`ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ..~, `ನಿನ್ನಿಂದಲೇ ನಿನ್ನಿಂದಲೇ ಕನಸೋಂದು ಶುರುವಾಗಿದೆ..~, `ಉಡಿಸುವೆ ಬೆಳಕಿನ ಸೀರೆಯಾ..~ ಈ ಮಾಧುರ್ಯ ತುಂಬಿದ ಹಾಡುಗಳನ್ನು ಹಾಡುವ ಗಾಯಕರು, ಹಾಡಿಸಿದ ಸಂಗೀತ ನಿರ್ದೇಶಕ ಮತ್ತು ಹಾಡಿನ ದೃಶ್ಯಾವಳಿಗಳನ್ನು ನೋಡುವ ಅವಕಾಶ ಬಂದಿದೆ. ಅದು 49ನೇ ಬೆಂಗಳೂರು ಗಣೇಶ ಉತ್ಸವದ ಅಂಗವಾಗಿ ನಡೆಯಲಿರುವ `ಮನೋಮೂರ್ತಿ ಸಂಗೀತ ಸಂಜೆ~ಯಲ್ಲಿ.
ಶನಿವಾರ ನಡೆಯಲಿರುವ ಈ ಸಂಗೀತ ಸಂಜೆ ಅಂತರ್‌ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ. ಮನೋಮೂರ್ತಿ ರಾಗ ಸಂಯೋಜನೆ ಮಾಡಿರುವ ಜನಪ್ರಿಯ ಹಾಡುಗಳನ್ನು ಹೇಮಂತ್, ಚೇತನ್, ರಾಜೇಶ್ ಕೃಷ್ಣನ್, ನಂದಿತಾ, ಚೈತ್ರಾ ಇತ್ಯಾದಿ ಗಾಯಕರು ಹಾಡಲಿದ್ದಾರೆ. ಅಲ್ಲದೇ ಹಾಡಿನ ತುಣುಕುಗಳನ್ನು ತೆರೆಯ ಮೇಲೆ ನೋಡುವ ಅವಕಾಶವೂ ಪ್ರೇಕ್ಷಕರಿಗೆ ದೊರಕಲಿದೆ.
ಮನೋಮೂರ್ತಿ ಅವರ 28 ಹಾಡುಗಳಲ್ಲಿ ಎಂಟು ಹಾಡುಗಳಿಗೆ ಮೈಸೂರಿನ `ಮಿರಾಕಲ್ಸ್~ ತಂಡ ನರ್ತಿಸಲಿದೆ, ಕಾರ್ಯಕ್ರಮದ ನಡುವೆ ರಮೇಶ್ ಅರವಿಂದ ಮತ್ತು ದಯಾನಂದ್ ಮನರಂಜನಾ ಕಾರ್ಯಕ್ರಮವೂ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.