
ಮಲೇಷ್ಯಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ವರ್ಷ ಶೇ 8.1ರಷ್ಟು ಏರಿಕೆಯಾಗಿದೆಯಂತೆ. 2013ರಲ್ಲಿ ಆರೂವರೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭಾರತದಿಂದ ಅಲ್ಲಿಗೆ ಹೋಗಿ ಬಂದಿದ್ದಾರೆ. ಮಲೇಷ್ಯಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಪ್ರವಾಸಿಗರು ತನ್ನ ದೇಶಕ್ಕೆ ಭೇಟಿ ನೀಡುತ್ತಿರುವ ನಾಲ್ಕನೇ ವರ್ಷಾಚರಣೆಯನ್ನು ರೆಸಿಡೆನ್ಸಿ ರಸ್ತೆಯ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ನಡೆಸಿತು.
ಪ್ರವಾಸೋದ್ಯಮ ಕುರಿತ ಮಹತ್ವದ ಅಂಕಿಅಂಶಗಳು ಅನಾವರಣಗೊಂಡ ಸಮಾರಂಭದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳೂ ನಡೆದವು. ಅಲ್ಲಿನ ವಿವಿಧ ಸಂಪ್ರದಾಯಗಳ ವಧುವರರ ಪೋಷಾಕಿನಲ್ಲಿ ಮಾಡೆಲ್‌ಗಳು ಕಂಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.