ADVERTISEMENT

ಮಹಿಳಾ ದಿನದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST
ಮಹಿಳಾ ದಿನದ ಸಂಭ್ರಮಾಚರಣೆ
ಮಹಿಳಾ ದಿನದ ಸಂಭ್ರಮಾಚರಣೆ   

ಅಂದು ಅಲ್ಲಿ ಸೇರಿದರವರ ಕಣ್ಣಲ್ಲಿ ಸಂಭ್ರಮ ಕಾಣಿಸುತ್ತಿತ್ತು. ವಿದ್ಯಾರ್ಥಿನಿಯರೆಲ್ಲ ಬಣ್ಣ ಬಣ್ಣದ ಸೀರೆ ತೊಟ್ಟು ನಲಿಯುತ್ತಿದ್ದರು. ಅವರೆಲ್ಲ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯರು. ಅಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿ ಅವರೆಲ್ಲ ಭಾಗಿಯಾಗಿದ್ದರು.

ಅವಕಾಶ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆ ಸುಕೃಪಾ ಪ್ರತಿಷ್ಠಾನದ ಸಂಸ್ಥಾಪಕಿ ಕೃಪಾಲತಾ ಮಾರ್ಟಿನ್ ದಾಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಹರಸಿದರು.

ಮಹಿಳೆಯರ ಬಲ ಮತ್ತು ಒಗ್ಗಟ್ಟನ್ನು  ಪ್ರತಿನಿಧಿಸಲು ಫುಟ್‌ಬಾಲ್ ಮೈದಾನದಲ್ಲಿ ವೃತ್ತಾಕಾರದಲ್ಲಿ  ವಿದ್ಯಾರ್ಥಿನಿಯರೆಲ್ಲ ಸೇರಿದ್ದರು. ಇದರ ನಂತರ ಕಾಲೇಜಿನ ಮೊದಲ ಅಕ್ಷರ ಎಂವಿಜೆಸಿಇ ಮಾದರಿಯಲ್ಲಿ ನಿಂತು ಸಂಭ್ರಮಿಸಿದರು.

ಡಾ.ಕೆ.ಎಸ್.ಬದ್ರಿನಾರಾಯಣ್ ಅವರು ಮಾತನಾಡುತ್ತಾ ಮಹಿಳಾ ಸಬಲೀಕರಣ, ಗ್ರಾಮೀಣ ಬಡತನ ನಿವಾರಣೆಗೆ ಒತ್ತು ನೀಡಿದರು. ಎಂವಿಜೆಸಿಇ ಬಾಲಕಿಯರು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದವು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.